ಶಿರಡಿ ಪ್ರವಾಸ

ಬೆಂಗಳೂರಿನಿಂದ ಶಿರಡಿಗೆ ಹೋಗಲು ಇರುವುದು 2 ರೈಲುಗಳು ಒಂದು ಕರ್ನಾಟಕ ಎಕ್ಸ್ ಪ್ರೆಸ್  ಇನ್ನೊಂದು ವಾರಕ್ಕೊಮ್ಮೆ ಇರುವ  ಮೈಸೂರು - ಸಾಯಿನಗರ್ ಎಕ್ಸ್ ಪ್ರೆಸ್ . ಎರಡಲ್ಲೂ 3 ತಿಂಗಳವರೆಗೆ ಟಿಕೆಟ್ ಲಭ್ಯಯಿರುವುದಿಲ್ಲ.

ಆಫೀಸಿನಿಂದ ಶಿರಡಿಗೆ ಹೋಗಲು (ಒಟ್ಟು 12 ಜನ) ತೀರ್ಮಾನಿಸಿದ್ದು  ನವೆಂಬರ್ 2015 ನಲ್ಲಿ ಆದರೆ ಟಿಕೆಟ್ ಸಿಕ್ಕಿದ್ದು 2016 ಫೆಬ್ರವರಿ 3 ನೇ ತಾರೀಖಿಗೆ  ಕರ್ನಾಟಕ ಎಕ್ಸ್ ಪ್ರೆಸ್ ನಲ್ಲಿ , ನಾಲ್ಕು ತಿಂಗಳ ದೀರ್ಘಕಾಲದ ನಂತರ ಶಿರಡಿಗೆ ಹೋಗುವ ಸಮಯ ಬಂದಾಗ  ಎಲ್ಲರಿಗೂ ಏನೊ ಉತ್ಸಾಹ,

DAY 1 (3-Feb-2016)

ಎಲ್ಲರೂ ರೈಲ್ವೇ ಫ್ಲಾಟ್ ಫಾರಂ ನಲ್ಲಿ ಸೇರಿದಾಗ ಗಂಟೆ  ಸಂಜೆ 7 ,  ರೈಲು 7.20 ಕ್ಕೆ ಹೊರಡಬೇಕಾಗಿತ್ತು  ಆದರೆ ಹೊರಟಿದ್ದು 7.30 ಕ್ಕೆ .


 ಮಾತುಕತೆ ಆರಂಭ..................

ರಾತ್ರಿ ಊಟಕ್ಕೆ SLN Mess ನಿಂದ ತಂದಿದ್ದ ಚಿತ್ರಾನ್ನ ಮತ್ತು ಮೊಸರನ್ನ  ಚೆನ್ನಾಗಿತ್ತು 10 ನಿಮಿಷದಲ್ಲಿ ತಂದಿದ್ದ ಚಿತ್ರಾನ್ನ , ಮೊಸರನ್ನ ಖಾಲಿ!!!, ಸ್ವಲ್ಪ ಹೊತ್ತು ಹರಟೆಯ ನಂತರ ನಿದ್ದಗೆ ಜಾರಿದೆವು.


ರೈಲು ಪ್ರಯಾಣ


DAY 2 (4-Feb-2016)


ಬೆಳಗ್ಗೆ ಎದ್ದು ಎಲ್ಲರೂ ಬೆಳಗಿನ ಕಾರ್ಯಕ್ರಮ ಮುಗಿಸಿ ಫ್ರೆಷ್ ಆದರು. ನಂತರ ಒಂದು ಸುತ್ತು ಟೀ ಮತ್ತು ಕಾಫಿ ಜೊತೆಗೆ ತಂದಿದ್ದ ಬಿಸ್ಕತ್ ತಿಂದು ಮುಗಿಸಿದೆವು. ಸಮಯ 8.30 ಇದು ಬೆಳಗಿನ ಉಪಹಾರದ ಸಮಯ SLN Mess ನಿಂದ ತಂದಿದ್ದ 40 ಚಪಾತಿ  ಮತ್ತು ಅದಕ್ಕೆ ತಂದಿದ್ದ ಟಮೊಟೊ ಗೊಜ್ಜು  ಚೆನ್ನಾಗಿತ್ತು ಮುಂದಿನ 15 ನಿಮಿಷದಲ್ಲಿ 40 ಚಪಾತಿಗಳು ಮಾಯವಾಗಿದ್ದವು. ನಂತರ ಹರಟೆ ಶುರುವಾಯಿತು  ಹರಟೆಗೆ ಬೆಂಗಳೂರಿನಿಂದ ತಂದ್ದಿದ್ದ ಬಿಸ್ಕತ್ ಗಳು , ಚಕ್ಕುಲಿ ನಿಪ್ಪಟ್ಟುಗಳು ಮತ್ತು ದ್ರಾಕ್ಷಿ , ಕಿತ್ತಳೆ ಹಣ್ಣುಗಳು  ಜೊತೆಯಾದವು.



ದ್ರಾಕ್ಷಿ ಜೊತೆಗೆ ಸೆಲ್ಫಿ

ದ್ರಾಕ್ಷಿ ತಿನ್ನುವ  ಆಟ

ಕೊಪರ್ ಗಾಂವ್ ಗೆ ರೈಲು ತಲುಪಿದಾಗ ಸಮಯ 1.50 ನಿಮಿಷ , ಕೊಪರ್ ಗಾಂವ್ ಯಿಂದ ಶಿರಡಿ 20 ಕಿ ಮೀ ದೂರ , ರೈಲು ನಿಲ್ದಾಣದಿಂದ ಜೀಪಿನಲ್ಲಿ (750 ರೂ) ಶಿರಡಿಯ ಭಕ್ತಿ ನಿವಾಸಕ್ಕೆ ತೆರಳಿದೆವು , ಭಕ್ತಿ ನಿವಾಸ ಶಿರಡಿ ಸಾಯಿಬಾಬ ಟ್ರಸ್ಟ್ ಸೇರಿದ ವಸತಿ ನಿಲಯ  ಆನ್ ಲೈನ್ ಮೂಲಕ ಒಂದು ತಿಂಗಳು ಮುಂಚಿತವಾಗಿ 3 ಕೊಠಡಿಗಳನ್ನು ( 4 ಬೆಡ್ ಗಳ 1 ಕೊಠಡಿಗೆ 150 ರೂ)  ಬುಕ್ ಮಾಡಿದ್ದೆವು. ಕೊಠಡಿಗಳು ವಿಶಾಲವಾಗಿಯು ಮತ್ತು ಅಚ್ಚುಕಟ್ಟಾಯು ಇದ್ದವು.

ಭಕ್ತಿ ನಿವಾಸದ ಕೊಠಡಿ



ಭಕ್ತಿ ನಿವಾಸ

ಎಲ್ಲರೂ ರೆಡಿಯಾಗಿ ಕೊಠಡಿಯಿಂದ ಹೊರಟಾಗ ಸಮಯ 4.30 ನಿಮಿಷ , ಗೇಟ್ ನಂ 3 ಯಿಂದ ದರ್ಶನಕ್ಕೆ ಹೊದೆವು ಸಾಲು ತುಂಬಾ ಉದ್ದ  ಇತ್ತು ,  ಮಂದಿರ ಪ್ರವೇಶಿಸುವ ವೇಳೆ ಸಮಯ 6 ಗಂಟೆ  , ಪ್ರತಿದಿನ ಸಂಜೆಯ ಧೂಪಾರತಿ 6.00 ಗಂಟೆಗೆ , ಸಾಯಿಬಾಬರ ಮೂರ್ತಿಯ ಮುಂಭಾಗದ ಹಾಲಿನಲ್ಲಿ ಕುಳ್ಳರಿಸಿದರು ನಂತರ  30 ನಿಮಿಷಗಳವರೆಗೆ ಆರತಿ ಮತ್ತು ಹಾಡುಗಳನ್ನು ಹಾಡಲಾಯಿತು. ದರ್ಶನ ಮುಗಿಸಿ ಮಂದಿರದಿಂದ ಹೊರಬಂದಾಗ ರಾತ್ರಿ 7 ಗಂಟೆ, ಪ್ರಸಾದ ಕೌಂಟರಿನಲ್ಲಿ ಪ್ರಸಾದ ಖರೀದಿಸಿ ಅಲ್ಲಿಂದ ನೇರವಾಗಿ ಪ್ರಸಾದಾಲಯಕ್ಕೆ(ಮಂದಿರದಿಂದ ಸುಮಾರು 0.5 ಕಿ.ಮೀ) ತೆರಳಿ ಊಟ ಮುಗಿಸಿದೆವು (ಊಟಕ್ಕೆ 5 ರೂ) . ಪ್ರಸಾದಾಲಯದ ಮುಂಭಾಗದಲ್ಲಿರುವ ಅಂಗಡಿಗಳಲ್ಲಿ ಸಾಯಿಬಾಬರ ಮೂರ್ತಿ ಗಳನ್ನು ಖರೀದಿಸಿ ಭಕ್ತಿ ನಿವಾಸಕ್ಕೆ ವಾಪಸಾದಗ ಸಮಯ ರಾತ್ರಿ 10 ಗಂಟೆ . ಭಕ್ತಿ ನಿವಾಸದ ಕ್ಯಾಂಟೀನ್ ನಲ್ಲಿ ಟೀ ಕುಡಿದು ನಾಳೆಯ ಕಾರ್ಯಕ್ರಮಗಳ ಬಗ್ಗೆ ಸಮಾಲೋಚಿಸಿದೆವು, ಬೆಳಗ್ಗೆ 6ಕ್ಕೆ ಮತ್ತೊಮ್ಮೆ ದರ್ಶನಕ್ಕೆ ಹೋಗುವುದೆಂದು ತೀರ್ಮಾನಿಸಿ ಕೊಠಡಿಗೆ ತೆರೆಳಿದೆವು.


DAY 3 (05-Feb-2016)


ಬೆಳಗ್ಗೆ 6 ಗಂಟೆಗೆ ಮತ್ತೊಮ್ಮೆ ದರ್ಶನ ಮಾಡಿ , ಬರುವಾಗ ತಿಂಡಿ ಮುಗಿಸಿ ಭಕ್ತಿ ನಿವಾಸಕ್ಕೆ ಬಂದು ಮತ್ತೊಂದು ಸುತ್ತು ಟೀ ಕುಡಿದ ನಂತರ  ಪೋಟೋ ಸೇಷನ್  ನಡೆಯಿತು ಇದಕ್ಕೆ ವಿಶೇಷ ಅತಿಥಿ ಜೊತೆಯಾದರು ???


ಅತಿಥಿ ಜೊತೆ ಪೋಟೋ



ಭಕ್ತಿ ನಿವಾಸದಲ್ಲಿ ಭಕ್ತರು


ಪೋಟೋ ಸೆಷನ್ ನಂತರ ರೂಂ ಖಾಲಿ ಮಾಡಿ  ಜೀಪಿನಲ್ಲಿ ಶನಿ ಶಿಂಗಾಪುರಕ್ಕೆ ಪ್ರಯಾಣ ಬೆಳೆಸಿದೆವು ,


ಶನಿ ಶಿಂಗಾಪುರ ಹೋಗುವ ದಾರಿಯಲ್ಲಿ ಸಣ್ಣ ವಿರಾಮ





   ಶನಿ ಶಿಂಗಾಪುರ ತಲುಪಿದಾಗ ಮದ್ಯಾಹ್ನ 12 ಗಂಟೆ , ಈ ಗ್ರಾಮ ಶನೀಶ್ವರ ದೇವಾಲಯದಿಂದಾಗಿ ಹೆಸರುವಾಸಿ. ಇಲ್ಲಿನ ವಿಶೇಷತೆ ಅಂದರೆ, ಈ ಊರಿನ ಯಾವ ಮನೆಗಳಿಗೂ ಬಾಗಿಲಿಲ್ಲ. ಅದು ಮನೆ ಇರಲಿ, ಅಂಗಡಿ ಇರಲಿ, ಇಲ್ಲ ಬ್ಯಾಂಕೇ ಆಗಿರಲಿ. ಈ ಗ್ರಾಮವು ದೇವರಿಂದ ರಕ್ಷಿತವಾದುದು ಮತ್ತು ಇಲ್ಲಿಂದ ಏನಾದರೂ ಕದ್ದರೆ ಆ ಕಳ್ಳ ಗಡಿದಾಟುವ ಮುನ್ನವೇ ಸಾಯುತ್ತಾನಂತೆ! ಈ ಗ್ರಾಮದಲ್ಲಿ ಕಳ್ಳತನವಾದ ದಾಖಲೆಗಳು ಇಲ್ಲವಂತೆ. ಇಲ್ಲಿನ ಇನ್ನೂ ಒಂದು ವೈಶಿಷ್ಠ್ಯವೆಂದರೆ, ಇಲ್ಲಿನ ನಿರ್ದಿಷ್ಟವಾದ ದೇವರ ಪ್ರತಿಮೆಯಾಗಲಿ, ಮೂರ್ತಿಯಾಗಲಿ ಇಲ್ಲ, ಆದರೆ ಒಂದು ಕಲ್ಲಿನ ಸ್ತಂಭ ಇದೆ. ಇದನ್ನು ಅಪರಿಮಿತ ಭಕ್ತಿ ಗೌರವಗಳಿಂದ ಇಲ್ಲಿಗೆ ಆಗಮಿಸುವ ಜನತೆ ಪೂಜಿಸುತ್ತಾರೆ. ಪವಿತ್ರ ಕಲ್ಲಿನ ಸ್ತಂಭಕ್ಕೆ ಭಕ್ತರು ಅಭಿಷೇಕ ನೆರವೇರಿಸುತ್ತಾರೆ. ವಿವಿಧ ದ್ರವ್ಯಗಳು, ನೀರು ಮತ್ತು ಎಳ್ಳೆಣ್ಣೆಯ ಅಭಿಷೇಕವನ್ನು ಮಾಡಲಾಗುತ್ತದೆ






  ದರ್ಶನ ಮುಗಿಸಿಕೊಂಡು ಅಲ್ಲಿಂದ ಅದೇ ಜೀಪಿನಲ್ಲಿ ರಹೂರಿಗೆ ಬಂದೆವು , ರಹೂರಿಯ ಉಡುಪಿ ಹೋಟೆಲ್ ನಲ್ಲಿ ಊಟ ಮುಗಿಸಿಕೊಂಡು ಅಲ್ಲಿಂದ ಬಸ್ಸಿನಲ್ಲಿ 25 KM ದೂರದ ಅಹಮದ್ ನಗರಕ್ಕೆ ಹೊರೆಟೆವು (ರೈಲಿನ ಟಿಕೆಟ್ ನ್ನು ಅಹಮದನಗರದಿಂದ ಮಾಡಿದ್ದೆವು) 

ಅಹಮದನಗರಕ್ಕೆ ರೈಲು 6.15 ಕ್ಕೆ ಬರಬೇಕಾಗಿತ್ತು ಆದರೆ ರೈಲು 1 ಗಂಟೆ 45 ನಿಮಿಷ ತಡವಾಗಿ ಅಂದರೆ 8 ಗಂಟೆಗೆ ಅಹಮದನಗರಕ್ಕೆ ಬಂದಿತು.


ರೈಲಿಗಾಗಿ ಕಾಯುತ್ತಿರುವುದು


 ಮುಂದಿನ ನಿಲ್ದಾಣದಲ್ಲಿ (ದೌಂಡ್ ಸ್ಟೇಷನಲ್ಲಿ)  ಊಟಕ್ಕೆ ಆನಲೈನ್ ಟ್ರಾವೆಲ್ ಖಾನ ಮೂಲಕ ಬುಕ್ ಮಾಡಿದ್ದೆವು. ರೈಲು ದೌಂಡ್ ಸ್ಟೇಷನ್  ತಲುಪಿದಾಗ ನಮ್ಮ ಬೋಗಿಯ ಮುಂದೆ ಬುಕ್ ಮಾಡಿದ್ದ ಊಟದ ಪಾರ್ಸಲ್ ರೆಡಿಯಾಗಿತ್ತು. ರೈಲಿನಲ್ಲಿ ಕೊಡುವ ಊಟಕ್ಕೆ ಹೋಲಿಸಿದರೆ. ಈ ಊಟ ತುಂಬಾ ಚೆನ್ನಾಗಿತ್ತು . 


ಈಗ ನಿದ್ದೆಗೆ ಜಾರುವ ಸಮಯ!!

ಮಾರೇನೆಯ ದಿನ ರೈಲು ಬೆಂಗಳೂರು ತಲುಪಿದಾಗ ಮದ್ಯಾಹ್ನ 1.30 ನಿಮಿಷ , ಇಲ್ಲಿಗೆ ಶಿರಡಿಯ ಪ್ರವಾಸವು ನಮ್ಮ ನೆನಪಿನಲ್ಲಿ ಸೇರಿಕೊಂಡಿತು.

ಉಪಯುಕ್ತ ಮಾಹಿತಿ :
1) ಶಿರಡಿಯ ಭಕ್ತಿ ನಿವಾಸದಲ್ಲಿ  ಕೊಠಡಿಯನ್ನು 2 ತಿಂಗಳ ಮುಂಚಿತವಾಗಿ ಆನ್ ಲೈನ್  ಮೂಲಕ ಬುಕ್ ಮಾಡಬಹುದು. ವಿಳಾಸ (https://online.sai.org.in) (100 ರೂ ನಿಂದ 500 ರೂ ವರೆಗೆ)


2) ರೈಲಿನಲ್ಲಿ ಊಟಕ್ಕಾಗಿ travelkhana.com ನಿಂದ ಬುಕ್ ಮಾಡಬಹುದು Phone  no: 08800-313131