ದೇವರಾಯನದುರ್ಗ

ಬೆಂಗಳೂರಿನಿಂದ ತುಮಕೂರು ರಸ್ತೆಯಲ್ಲಿ ದಾಬಸ್ ಪೇಟೆವರೆಗೂ(40 KM) ಹೋಗಿ ದಾಬಸ್ ಪೇಟೆಯಲ್ಲಿ ಬಲಕ್ಕೆ ಕೊರಟಗೆರೆ  ರಸ್ತೆಯಲ್ಲಿ  15 ಕಿ ಮೀ ಚಲಿಸಿದರೆ ಊರ್ಡಿಗೆರೆ ಸಿಗುತ್ತದೆ ಅಲ್ಲಿಂದ ದೇವರಾಯನದುರ್ಗ ಕ್ಕೆ  6 ಕಿ ಮೀ  ಪಯಣ.

ವಿಜಯನಗರದ  ಅರಸರ ಕಾಲದಲ್ಲಿ ಕರಿಗಿರಿ  ಎಂದು ಹೆಸರು ಕಾಲಾನಂತರ ಮುಂದೆ ಚಿಕ್ಕದೇವರಾಯ ಒಡೆಯರು ಗೆದ್ದದ್ದರಿಂದ ಇದು ದೇವರಾಯನದುರ್ಗ ವಾಯಿತು. ಬೆಟ್ಟದ ಮೇಲೆ ಯೋಗಾಲಕ್ಷ್ಮಿನರಸಿಂಹಸ್ವಾಮಿ ಮತ್ತು ಕೆಳಭಾಗದಲ್ಲಿ ಭೋಗಾಲಕ್ಷ್ಮಿನರಸಿಂಹಸ್ವಾಮಿ ದೇವಾಲಯಗಳಿವೆ

ನಾನು ಮತ್ತು ದಿನಕರ್ ಬೆಳಗ್ಗೆ ಬೆಂಗಳೂರಿನಿಂದ ಬೈಕ್ ಏರಿ ಹೊರಟಾಗ ಸಮಯ 10 ಗಂಟೆ  ಮದ್ಯೆ  ಊರ್ಡಿಗೆರೆಯಲ್ಲಿ ಒಂದು ಸಣ್ಣ ಟೀ ಬ್ರೆಕ್ ತೆಗೆದುಕೊಂಡು ಮುಂದಕ್ಕೆ ಹೊರೆಟೆವು ದೇವರಾಯನದುರ್ಗದ ಕ್ರಾಸ್ ನಲ್ಲಿ ಎಡಕ್ಕೆ ತಿರುಗಿದರೆ ಇಲ್ಲಿಂದ ಮುಂದಕ್ಕೆ ಅಕ್ಕ ಪಕ್ಕ ಹಸಿರಿನಿಂದ ಕೂಡಿರುವ ಮರ ಗಿಡಗಳ ಮದ್ಯೆ ಸಾಗುವುದೇ ಒಂದು ಸುಂದರ ಅನುಭವ.



 ಮೊದಲು ಊರಿನಲ್ಲಿ ಸಿಗುವ ಭೋಗಾಲಕ್ಷ್ಮಿನರಸಿಂಹಸ್ವಾಮಿ ದೇವಾಲಯಕ್ಕೆ ಹೋದೆವು ರಜಾ ದಿನವಾಗಿದ್ದರಿಂದ ಜನಸಂದಣಿ ಜಾಸ್ತಿ ಇತ್ತು ದರ್ಶನ ಮುಗಿಸಿ ಹೊರ ಬರಲು ಸುಮಾರು 1 ಗಂಟೆ ಬೇಕಾಯಿತು.





ಅಲ್ಲಿಂದ ಮೇಲಕ್ಕೆ ಘಾಟ್ ರಸ್ತೆಯಲ್ಲಿ ಬೆಟ್ಟದ ತುದಿಯವರೆಗೂ ಹೋದೆವು. ಇಲ್ಲಿ ಮೊದಲು ಕಾಣಿಸಿದ್ದು ಮೆಟ್ಟಿಲುಗಳನ್ನು ಏರುವ ಪ್ರವೇಶದ್ವಾರದಲ್ಲಿರುವ ಬಜ್ಜಿ ಅಂಗಡಿಗಳು, ಒಂದು ಸುತ್ತು ಬಜ್ಜಿಯ ಸವಿಯನ್ನು ಸವಿದು ಹೊರೆಟೆವು. 










ಇಲ್ಲಿಂದ ಸುಮಾರು 100 ಮೆಟ್ಟಿಲುಗಳನ್ನು ಏರಿ ಯೋಗಾಲಕ್ಷ್ಮಿನರಸಿಂಹಸ್ವಾಮಿ ದೇವಾಲಯಕ್ಕೆ ಬಂದಿದ್ದೆವು. 










ಇಲ್ಲಿ ಜನಸಂದಣಿ ಕಡಿಮೆ ಇತ್ತು ಸುಮಾರು 10 ನಿಮಿಷದಲ್ಲಿ ದರ್ಶನ ಮುಗಿಸಿ ಅಲ್ಲೆ ಪಕ್ಕದಲ್ಲಿದ್ದ ರಾಮತೀರ್ಥ ಕಲ್ಯಾಣಿ ಮುಂದಿನ ಕಾಲುದಾರಿಯಲ್ಲಿ ಎಡಕ್ಕೆ ತಿರುಗಿ ಗಿಡ ಬಳ್ಳಿಗಳ ಮದ್ಯೆ ತೂರಿ ಒಂದೆರೆಡು ಬಂಡೆಗಳನ್ನು ಏರಿ 15 ನಿಮಿಷದಲ್ಲಿ ಬೆಟ್ಟದ ನೆತ್ತಿಗೆ ಹೋಗಿದ್ದೆವು.  ಸ್ಥಳ ತುಂಬಾ ಪ್ರಶಾಂತವಾಗಿತ್ತು ಮತ್ತು ಸುತ್ತಲಿನ ಪರಿಸರ ಅದ್ಭುತವಾಗಿತ್ತು . 










ಇಲ್ಲಿಂದ ದಿನಕರ್ ಫೋಟೋ ಶೋಟ್ ಶುರುವಾಯಿತು...............













ಫೋಟೋ ಶೂಟ್ ಮುಗಿದ ನಂತರ ದಿನಕರ್  ಮನೆಯಿಂದ ತಂದಿದ್ದ  ಮೆಂತ್ಯ ಗಂಜಿ !! ತಿಂದು ಅಲ್ಲೆ ಸ್ವಲ್ಪ ಸಮಯ ವಿಶ್ರಾಂತಿ ಪಡೆದು ಮತ್ತೆ ಕೆಳೆಗೆ ಇಳಿದು ಪ್ರವೇಶದ್ವಾರದ ಬಳಿ ಬಂದಾಗ ಮತ್ತೊಮ್ಮೆ ಬಜ್ಜಿ ರುಚಿ ನೋಡಿ ಅಲ್ಲಿಂದ ಹೊರಟಾಗ ಸಮಯ ಸುಮಾರು 3 ಗಂಟೆ , ಬೆಂಗಳೂರು ತಲುಪಿದಾಗ ಸಂಜೆ 5 ಗಂಟೆ.