ಶ್ರೀಕಾರಿಂಜೇಶ್ವರ ದೇವಸ್ಥಾನ

 ಶ್ರೀಕಾರಿಂಜೇಶ್ವರ ದೇವಸ್ಥಾನವು ಕಾರಿಂಜ ಎಂಬ ಸ್ಥಳದಲ್ಲಿ ನೆಲೆಗೊಂಡಿರುವ ಪ್ರಸಿದ್ಧ ಶಿವ ದೇವಾಲಯವಾಗಿದೆ. ಇದು ಬಂಟ್ವಾಳ ತಾಲ್ಲೂಕಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಈ ದೇವಾಲಯವು ಕಾರಿಂಜ ಗ್ರಾಮದ ಬೆಟ್ಟದ ಮೇಲಿರುತ್ತದೆ. ಇದು ಬೆಟ್ಟದ ಮೇಲಿನಿಂದ ಸುತ್ತಮುತ್ತಲಿನ ಭವ್ಯ ನೋಟವನ್ನು ನೀಡುತ್ತದೆ.

ಈ ದೇವಾಲಯವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಒಂದು ಶಿವನಿಗೆ ಮತ್ತು ಇನ್ನೊಂದು ಪಾರ್ವತಿ ಮತ್ತು ಗಣೇಶ ದೇವರಿಗೆ. ದೇವಾಲಯವನ್ನು ತಲುಪಲು ಸುಮಾರು 355 ಮೆಟ್ಟಿಲುಗಳಿವೆ.  ಪಾರ್ವತಿ ದೇವಿಯ ದೇವಾಲಯ ಮಧ್ಯ ಭಾಗದಲ್ಲಿದ್ದರೆ ಶಿವನ ದೇವಾಲಯವು ಬೆಟ್ಟದ ತುದಿಯಲ್ಲಿದೆ.   ಶಿವ ದೇವಾಲಯವನ್ನು ಜೈನ ಹಾಗೂ ವೈಷ್ಣವ ಶೈಲಿಯಲ್ಲಿ ನಿರ್ಮಿಸಲಾಗಿದೆ.

ಭೀಮನು ತನ್ನ ಗಧೆಯನ್ನು ನೆಲದ ಮೇಲೆ ಎಸೆದನು ಮತ್ತು ಅಲ್ಲಿ ಒಂದು ಕೊಳವು ರೂಪುಗೊಂಡಿತು ಎಂದು ನಂಬಲಾಗಿದೆ, ಈ ಕೊಳವನ್ನು ‘ಗಧಾ ತೀರ್ಥ’ ಎಂದು ಕರೆಯಲಾಗುತ್ತದೆ. ಇದಲ್ಲದೆ, ಭೀಮನ ಹೆಬ್ಬೆರಳಿನಿಂದ ‘ಅಂಗುಷ್ಟ ತೀರ್ಥ’ ರಚಿಸಲ್ಪಟ್ಟಿತು ಮತ್ತು ಅವನು ನೆಲದ ಮೇಲೆ ಮಂಡಿಯೂರಿದಾಗ, ‘ಜನು ತೀರ್ಥ’ ಎಂಬ ಮತ್ತೊಂದು ಕೊಳವನ್ನು ರಚಿಸಲ್ಪಟ್ಟಿತು. ಈ ಕೊಳಗಳನ್ನು ದೇವಾಲಯದಲ್ಲಿ ಕಾಣಬಹುದು














Ganesh Pal Temple

 

Ganesh Pal specialty of this place is river shalmala divert in to two making small island, in the middle of island ganesh temple is there, so its called Ganesh Paalu. its 35Km from Sirsi .


ಅಲ್ಲಲ್ಲಿ ಚದುರಿಕೊಂಡಂತಿರುವ ಕಿರಿದಾದ ಬಂಡೆ ಕಲ್ಲುಗಳು, ಸಣ್ಣದಾಗಿ ಹರಿದು ಹೋಗ್ತಿರೋ ಜಲರಾಶಿ. ಮಧ್ಯೆ ನಡುಗುಡ್ಡೆಯಲ್ಲಿ (Shri Ganesh Pal Temple) ನೆಲೆಸಿರೋ ವಿಘ್ನ ವಿನಾಯಕನು. ಕೇವಲ ಆರು ತಿಂಗಳಷ್ಟೇ ದರ್ಶನ ನೀಡೋ ಇವನು (Ganapati Temple) ಭಕ್ತರ ಪಾಲಿನ ಸರ್ವ ಸಿದ್ಧಿ ಪ್ರದಾಯಕ!


ವರ್ಷಕ್ಕೆ ಆರು ತಿಂಗಳಷ್ಟೇ ದರ್ಶನ ನೀಡೋ ಈ ಗಣಪ ಉಳಿದ ಆರು ತಿಂಗಳಲ್ಲಿ ಶಾಲ್ಮಲೆಯ ಮರೆಯಲ್ಲಿರುತ್ತಾನೆ.‌ ವಿಶೇಷ ಅಂದ್ರೆ ಈ ಗಣಪತಿ ಮೂರ್ತಿಯು ಸಾಸಿವೆಯಷ್ಟು ಬೆಳೆಯುತ್ತೆ ಅನ್ನೋ ನಂಬಿಕೆಯಿದೆ.














ಶಿವಗಂಗಾ ಜಲಪಾತ

 Shivaganga is a beautiful waterfall located in an area of thick forest on the river Sonda in Sirsi , around 35 Kms from Sirsi .


ರುದ್ರ ರಮಣೀಯ ಶಿವಗಂಗಾ ಜಲಪಾತ

ಶಿವಗಂಗಾ ಜಲಪಾತದಲ್ಲಿ ಶಾಲ್ಮಲೆ ಸುಮಾರು 359 ಅಡಿ ಎತ್ತರದಿಂದ ಬಾಗುತ್ತ, ಬಳುಕುತ್ತಾ 3ಹಂತದ ಜಲಧಾರೆಯಾಗಿ ಧುಮುಕಿ ಕಣಿವೆಗೆ ಇಳಿಯುತ್ತಾಳೆ. ಸುಂದರ ಹಾಲ್ನೊರೆಯ ದೃಶ್ಯ ಬೇಸಿಗೆಯಲ್ಲಿ ಗೋಚರಿಸಿದರೆ, ಮಳೆಯ ಕೆನ್ನೀರು ಧುಮ್ಮಿಕ್ಕುವ ನೋಟ ಕಣ್ಣು ತುಂಬುತ್ತದೆ.

ಎರಡು ಶಿಲಾ ರಚನೆಯ ಅದ್ಭುತ ಪದರಗಳ ಮಧ್ಯೆ ಸಾಗುವ ಈ ಜಲಪಾತ ತನ್ನ ಪ್ರತಿ ಹಂತದ ತಳಭಾಗ ತಲುಪುವ ಚಪಲವನ್ನು ಪ್ರವಾಸಿಗನ ಮನದಲ್ಲಿ ಮೂಡಿಸುತ್ತದೆ. ನದಿ ತಟದ ಮುಖಾಂತರ ಕಡಿದಾದ ಶಿಲಾ ಭಾಗವನ್ನು ಏರುತ್ತಾ ಜಲಪಾತದ ನೀರ ಹನಿಗಳ ಆನಂದ ಪಡೆಯುವಾಸೆ ಮೂಡುವುದು ಸಹಜ. ಆದರೆ ಇದು ಅಪಾಯಕಾರಿ. ಎಂಥ ತಜ್ಞ ಸಾಹಸಿಯನ್ನು ಕಂಗೆಡಿಸ ಬಲ್ಲ ಪೃಕೃತಿ ಸೋಜಿಗ ಶಿವಗಂಗಾ ಜಲಪಾತ.

ಶಾಂತವಾಗಿ ಹುಡುಗಾಟಕ್ಕೆ ತೊಡಗದೆ, ದೈಹಿಕ ಸಮತೋಲನ ಮತ್ತು ಸಹಜವಾದ ರೀತಿಯಿಂದ ದಡದಲ್ಲಿನ ಸುರಕ್ಷಿತ ಶಿಲೆಗಳ ಮೇಲೆ ಕುಳಿತು ಹವ್ಯಾಸಿ ಮೀನುಗಾರಿಕೆ ನಡೆಸುತ್ತ ಆನಂದಿಸಬಹುದು. ಹೊತ್ತು ತಂದ ಬುತ್ತಿ ತಿನ್ನಬಹುದು.

ಜಲಪಾತದ ಪ್ರತಿ ಹಂತದ ಮುಂದಿನ ಶಾಂತ ಶಾಲ್ಮಲೆಯ ಒಡಲಲ್ಲಿ ಅಡಗಿದೆ ರುದ್ರತೆಯ ರಹಸ್ಯ. ಅದೇ ಆಳದ ನೀರ ಸುಳಿವಿನಿಂದ ಕೂಡಿದ ಶಿಲಾ ಪದರದ ಮಧ್ಯೆ ಅವಿತಿರುವ ಮೂರು ಗುಂಡಿಗಳೆನ್ನಿ ಅಥವಾ ಮಡುವು ಎನ್ನಬಹುದಾದ ಸ್ಥಾನಗಳು. ಶಾಲ್ಮಲೆಯ ಸೊಬಗು ಜಲಧಾರೆಯಲ್ಲಿ ಅದ್ಭುತವಾಗಿ ಗೋಚರಿಸಿದರೆ, ನದಿಯ ಪಾತ್ರ ತಲುಪಿದವರಿಗೆ ಬೇಸಿಗೆಯ ದಿನದಲ್ಲಿ ಜುಳು ಜುಳು ಹರಿವ ಸ್ವಚ್ಛ ನೀರು ಸಾಹಸಕ್ಕೆ ಕೈಬೀಸುತ್ತದೆ, ತನ್ನೊಡಲ ಭಯಾನಕತೆಯ ಮುಚ್ಚಿಟ್ಟು. ನೀರ ಮೋಹಕತೆಗೆ ಮರುಳಾಗಿ ಈಸಲೆಂದೋ, ಪಕ್ಕದ ಶಿಲಾ ಪದರದಿಂದ ಡೈವ ಹೊಡೆಯುವ ಅಥವಾ ನೀರಾಟಕ್ಕೆಂದು ಇಳಿದರೆ, ಹಿಂದೆ ಇತಿಹಾಸದ ಪುಟ ಸೇರಿದ ಘಟನೆಗಳ ಪುನರಾವರ್ತನೆ ಸಂಭವವೇ ಹೆಚ್ಚು.

ಈ ಜಲಪಾತದ ಕಣಿವೆಯ ನದಿಯ ಹರಿವ ಪಾತ್ರದ ತನಕ ತಲುಪುವ ಮಾರ್ಗ ಕಡಿದಾದ ಮಲೆನಾಡ ಅರಣ್ಯ ಹಾದಿಯಲ್ಲಿ ಇಳಿಯುತ್ತ ಸಾಗಬೇಕು. ಇದು ಪ್ರಯಾಸದ ದಾರಿಯಾದ್ದರಿಂದ ಎಚ್ಚರಿಕೆ ಅಗತ್ಯ. ಎಚ್ಚರಿಕೆ ಫಲಕಗಳು ಜಲಪಾತದಲ್ಲಿನ 3 ಭಯಾನಕ ಗುಂಡಿಗಳ ಮಾಹಿತಿ ನೀಡುತ್ತವೆ. ದೊರೆತ ಮಾಹಿತಿಯಂತೆ ಜಲಪಾತದ 3 ಹಂತದಲ್ಲಿ ತಲಾ ಒಂದರಂತೆ ಇರುವ ಈ ಗುಂಡಿಗಳು ಒಂದಕ್ಕಿಂತ ಒಂದು ಆಳವಾಗಿದ್ದು ಇದರ ಒಳಭಾಗದಲ್ಲಿ ನೀರ ರಭಸಕ್ಕೆ ಕಲ್ಲಿನ ಪದರ ಕೊರೆದು ಪೊಟರೆಗಳು ಉಂಟಾಗಿವೆ.

















ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ (Kamalashile)

 

ಉಡುಪಿ ಜಿಲ್ಲೆಯ ಕುಂದಾಪುರದಿಂದ 35 ಕಿ.ಮಿ. ಅಂತರದ ಸಿದ್ದಾಪುರದಿಂದ 6 ಕಿ.ಮಿ. ಅಂತರದಲ್ಲಿನ ಪ್ರಕೃತಿ ರಮಣೀಯ ಕ್ಷೇತ್ರ, ಮಗ್ಗುಲಿನಲ್ಲೇ ಹರಿವ ಕುಬ್ಜ ನದಿ. ಪ್ರತಿಬಾರಿ ಮಳೆಗಾಲದ ದಿನಗಳಲ್ಲಿ ಒಂದೆರಡು ಬಾರಿಯಾದರೂ ನದಿಯ ನೀರು ಉಕ್ಕಿ ಹರಿದು, ದುರ್ಗೆಯ ಗರ್ಭಗುಡಿಯನ್ನು ಪ್ರವೇಶಿಸಿ ದೇವಿಯ ಸೇವೆ ಮಾಡುತ್ತದೆಯಂತೆ.  ಸಂತೃಪ್ತಿಯಲ್ಲಿ ಊಟ ಬಡಿಸುವ ದೇವಸ್ಥಾನವೊಂದು ಇದ್ದರೆ ಅದು ಸಿದ್ದಾಪುರದ ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ!. ನೀವೊಮ್ಮೆ ಕಮಲಶಿಲೆ ದೇವಸ್ಥಾನದಲ್ಲಿ ಊಟ ಮಾಡಿದಿರೆಂದರೆ ಆ ಊಟವನ್ನ ಜೀವನದಲ್ಲೆಂದೂ ಮರೆಯುವುದು ಸಾಧ್ಯವಿಲ್ಲ. ಅಲ್ಲಿ ಬಡಿಸುವ ಪ್ರತೀ ಅಗುಳು ಅನ್ನದಲ್ಲೂ ಪ್ರೀತಿಯಿದೆ,  ಅತ್ಯಂತ ಕಾರಣೀಕ ಕ್ಷೇತ್ರವಾದ ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ಕ್ಷೇತ್ರ ಕೇವಲ ಒಂದು ದೇವಸ್ಥಾನವಾಗಿ ಮಾತ್ರವೇ ಅಲ್ಲ ಅಲ್ಲಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಬಂದ ಭಕ್ತರನ್ನ ಗೌರವಿಸುವ ವಿಚಾರದಲ್ಲಿಯೂ ನೂರು ಹೆಜ್ಜೆ ಮುಂದಿದೆ.

ಸುಪಾರ್ಶ್ವ ಗುಹೆ

ಈ ಗುಹೆಯು ಸ್ವಾಭಾವಿಕವಾಗಿ ನಿರ್ಮಾಣವಾಗಿದ್ದು, ಸಾವಿರಾರು ವರ್ಷಗಳ ಹಿಂದೆ ಸುಪಾರ್ಶ್ವ ಎನ್ನುವ ಋಷಿಮುನಿ ಈ ಗುಹೆಯಲ್ಲಿ ಸಪಸ್ಸು ಮಾಡಿದ್ದರೆಂದು ಈ ಗುಹೆಗೆ ಸುಪಾರ್ಶ್ವ ಗುಹೆ ಎಂದು ಹೆಸರು ಬಂದಿದೆ. ಈ ಆದಿಗುಹಾಲಯವು ಕಮಲಶಿಲೆ ದೇವಿಯ ಮೂಲಸ್ಥಳವಾಗಿದೆ.

ಈ ಗುಹೆಯಲ್ಲಿ ಜಲ ಉದ್ಭವ ಕಾಣಸಿಗುತ್ತದೆ , ವರ್ಷದ ಎಲ್ಲ ಕಾಲದಲ್ಲೂ ಇಲ್ಲಿ ನೀರು ಕಾಣ ಸಿಗಲಿದ್ದು , ಈ ನೀರು ಕಮಲಶಿಲೆಯ ದೇವಸ್ಥಾನದ ಪಕ್ಕದಲ್ಲಿ ಹರಿಯುವ ಕುಭ್ಜಾ ನದಿಯನ್ನು ಸೇರಲಿದ್ದು, ಪ್ರತೀ ವರ್ಷ ಮಳೆಗಾಲದಲ್ಲಿ ಒಮ್ಮೆ ನದಿಯ ನೀರು ಉಕ್ಕಿ ದೇವಸ್ಥಾನ ಪ್ರವೇಶಿಸಿ ದೇವಿಗೆ ಅಭಿಷೇಕದ ರೀತಿಯಲ್ಲಿ ಸ್ಪರ್ಶಿಸಿ ಹೋಗುತ್ತದೆ.













ಸಹಸ್ರ ಲಿಂಗ (Sahasra Linga)


ಸಹಸ್ರ ಲಿಂಗವು ಸಿರ್ಸಿ-ಯಲ್ಲಾಪುರ ರಸ್ತೆಯಲ್ಲಿ ಸಿರ್ಸಿಯಿಂದ ಸುಮಾರು 12 ಕಿ.ಮೀ ದೂರದಲ್ಲಿ ಮುಖ್ಯ ರಸ್ತೆಯಿಂದ ೦.5 ಕಿ.ಮೀ ದೂರದಲ್ಲಿದೆ. ಶಾಲ್ಮಲಾ ನದಿಯ ಹರಿವಿನಲ್ಲಿ ಇರುವ ಕಲ್ಲು ಬಂಡೆಗಳ ಮೇಲೆ ಬಹಳಷ್ಟು ಲಿಂಗ ಮತ್ತು ನಂದಿ ವಿಗ್ರಹಗಳನ್ನು ಕೆತ್ತಿದ್ದಾರೆ.ಇದರಿಂದಾಗಿ ಇದಕ್ಕೆ ಸಹಸ್ರಲಿಂಗ ಎಂಬ ಹೆಸರು ಬಂದಿದೆ.

ಈ ಪ್ರವಾಸಿ ತಾಣವು ಸೋಂದಾ ಮತ್ತು ಸ್ವರ್ಣವಲ್ಲಿ ಮಠಗಳಿಗೆ ತುಂಬಾ ಹತ್ತಿರದಲ್ಲಿದೆ. ಈ ಲಿಂಗಗಳನ್ನು ಕೆಳದಿ ನಾಯಕರ ಕಾಲದಲ್ಲಿ ಕೆತ್ತಲಾಗಿದೆ ಎಂದು ಹೇಳುತ್ತಾರೆ. ಕೆಲವು ಲಿಂಗಗಳು ಪ್ರಾಕೃತಿಕ ರಚನೆಯಂತೆಯೂ ಕಾಣುತ್ತದೆ. ಸಿರ್ಸಿ-ಯಲ್ಲಾಪುರ ನಡುವಿನ ರಸ್ತೆಯಲ್ಲಿ ಈ ಪ್ರದೇಶವಿದ್ದು , ಶಾಲ್ಮಲಾ ನದಿಯ ಒಟ್ಟು ಜಾಗವನ್ನು ಸಂರಕ್ಷಿತ ಪ್ರದೇಶವೆಂದು ಘೋಶಿಸಲಾಗಿದೆ.ದಾರಿಯುದ್ದಕ್ಕೂ ಪಕ್ಷಿಗಳ ಕಲರವ, ಮತ್ತೆ ಮತ್ತೆ ಸವಿಯಬೇಕೆನ್ನುವ ಕಾಡು ಹಣ್ಣುಗಳು,ಸುವಾಸಿತ ಹೂವುಗಳು ಜನರನ್ನು ಸೆಳೆಯುತ್ತದೆ.