ಬಲ್ಲಾಳರಾಯನ ದುರ್ಗ (Ballalarayana Durga)


ಬಲ್ಲಾಳ ರಾಯನ ದುರ್ಗ ಕುದುರೆಮುಖ ಪರ್ವತಶ್ರೇಣಿಯಲ್ಲಿರುವ ಒಂದು ಪರ್ವತ. ಇದು ಚಿಕ್ಕಮಗಳೂರಿನ ಪ್ರವಾಸಿ ಸ್ಥಳ. ದಕ್ಷಿಣಕನ್ನಡ ಮತ್ತು ಚಿಕ್ಕಮಗಳೂರಿನ ಗಡಿಯಲ್ಲಿದ್ದು ಮೂಡಿಗೆರೆ ತಾಲೂಕಿನಲ್ಲಿರುವ ಸುಂಕಸಾಲೆ ಗ್ರಾಮದಲ್ಲಿದೆ

ಮಾರ್ಗ 1
ಇದೊಂದು ಪ್ರಶಸ್ತವಾದ ಚಾರಣ ಸ್ಥಳವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮುಂಡಾಜೆಯಿಂದ ಬಂಡಾಜೆ ಅರ್ಬಿ ಜಲಪಾತಕ್ಕೆ ಚಾರಣ ಮಾಡಿ ಅಲ್ಲಿಂದ ಮುಂದೆ 5 ಕಿ.ಮೀ ಚಾರಣ ಮಾಡಿದರೆ ಬಲ್ಲಾಳ ರಾಯನ ದುರ್ಗ ತಲುಪಬಹುದು

ಮಾರ್ಗ 2
ಕೊಟ್ಟಿಗೆಹಾರ ರಸ್ತೆಯಿಂದ ಕಳಸಕ್ಕೆ ಸಾಗುವ ಮಾರ್ಗದಲ್ಲಿ ಸುಂಕಸಾಲೆ ಗ್ರಾಮದ ಬಳಿ ಒಂದು ರಸ್ತೆ ಎಡಕ್ಕೆ ಸಾಗಿದರೆ  ಬಲ್ಲಾಳರಾಯನ ದುರ್ಗದ ಬುಡ ತಲುಪಬಹುದು.  ಕೋಟೆ ಇರುವ ಸ್ಥಳಕ್ಕೆ ಸಾಗಬೇಕಾದರೆ ಸುಮಾರು 3 ಕಿ.ಮಿ ದೂರ ಬೆಟ್ಟಸಾಲುಗಳ ನಡುವೆ ಕಾಲ್ನಡಿಗೆಯಲ್ಲೆ ಸಾಗಬೇಕು



  ಬಂಡಾಜೆಗೆ ಗುಡ್ ಬೈ ಹೇಳಿ ಹೊರಟಾಗ ಸಮಯ 7.30 ನಿಮಿಷ ,  ಇಲ್ಲಿಂದ ಹಾದಿ ನೆನ್ನೆ ಇದ್ದಷ್ಟು ಕಠಿಣವಾಗಿರಲಿಲ್ಲ . ಆದರೆ ಪ್ರಕೃತಿಯ ಸೊಬಗು  ಸುಂದರವಾಗಿತ್ತು , ಇಲ್ಲಿಂದ ಕಾಣುವ ಕುದುರೆಮುಖದ ಬೆಟ್ಟದ ಸಾಲುಗಳ ಜೊತೆ ಮಂಜು ಸೇರಿ  ಅದ್ಬುತವಾಗಿ  ಕಾಣಿಸುತ್ತಿತ್ತು. ಇಲ್ಲಿ ಕ್ಯಾಮಾರದಲ್ಲಿ ಎಷ್ಟು ಪೋಟೊ ತೆಗೆದರು ತೃಪ್ತಿಯಾಗುತ್ತಿರಲಿಲ್ಲ. 










ಸುಮಾರು 1 ಗಂಟೆ ಚಾರಣದ ನಂತರ ತಿಂಡಿಯ ಸಮಯ ನೆನ್ನೆ ಉಳಿದಿದ್ದ ಚಪಾತಿ ಜೊತೆಗೆ ಟಮೊಟೊ ಗೊಜ್ಜು ಖಾಲಿ ಮಾಡಿದೆವು. ಮತ್ತೆ ನಮ್ಮ ಪಯಣ ಬಲ್ಲಾಳರಾಯನ ದುರ್ಗದ ಕಡೆಗೆ ಮುಂದುವರೆಯಿತು.  ಕೊನೆಯದಾಗಿ ನಾವು ದುರ್ಗ ತಲುಪಿದಾಗ 10 ಗಂಟೆ, ಕೋಟೆಯ ಒಂದು ಸುತ್ತು ಬರುವುದಕ್ಕೆ ಸುಮಾರು 1 ಗಂಟೆ ಬೇಕು ಅಷ್ಟು ಶಕ್ತಿ ನಮ್ಮಲಿರಲಿಲ್ಲ ಒಂಡೆರೆಡು ವೀವ್ ಪಾಯಿಂಟ್ ಗಳನ್ನು ನೋಡಿ ಕೊಂಡು ದುರ್ಗದಹಳ್ಳಿ ಕಡೆಗೆ ಹೊರೆಟೆವು.






 ಇಲ್ಲಿಂದ  ದುರ್ಗದಹಳ್ಳಿಗೆ 3 ಕಿ.ಮೀ ಗಳ ಚಾರಣ ನಾವು ಸುಮಾರು 45 ನಿಮಿಷದಲ್ಲಿ ಕೆಳೆಗೆ ಇಳಿದೆವು. ಅಲ್ಲಿಂದ ಆಟೋದಲ್ಲಿ ಸುಂಕಸಾಲೆ ತಲುಪಿದಾಗ ಸಮಯ 12.30 ನಿಮಿಷ,  ಸುಂಕಸಾಲೆ ಯಿಂದ  ಹೊರನಾಡು ಅನ್ನಪೂರ್ಣೇ ಶ್ವರಿ  ದೇವಸ್ಥಾನಕ್ಕೆ 1 ಗಂಟೆಗಳ ಪಯಣ. ಬಸ್ಸಿನಲ್ಲಿ  ಹೊರನಾಡು ತಲುಪಿದೆವು  ದರ್ಶನ ಮುಗಿಸಿ ನಂತರ ಬೋಜನಾಲಯದಲ್ಲಿ ಊಟ ಮಾಡಿದೆವು ಸಮಯ 4 ಗಂಟೆ.  ಬೆಂಗಳೂರಿಗೆ ಬಸ್ ಇದ್ದದ್ದು ರಾತ್ರಿ 8 ಗಂಟೆ ಈಗ ಹೊರನಾಡುವಿನ ಬೀದಿಗಳಲ್ಲಿ ಒಂದು ಸುತ್ತು ಹಾಕಿ ರಾತ್ರಿ ಮತ್ತೊಮ್ಮೆ ದರ್ಶನ ಮಾಡಿ ಹೊರೆಟೆವು.






ಬಂಡಾಜೆ ಜಲಪಾತ

ಬಂಡಾಜೆ ಜಲಪಾತ

ಮಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಉಜಿರೆಯಿಂದ ಚಾರ್ಮಡಿ ಮಾರ್ಗವಾಗಿ ಸುಮಾರು ಆರೇಳು ಕಿ.ಮೀ. ಕ್ರಮಿಸಿದರೆ ಸೋಮಂತಡ್ಕ ಎಂಬ ಸಣ್ಣ ಪೇಟೆ ಎದುರಾಗುತ್ತದೆ. ಬಂಡಾಜೆಯ ಸೌಂದರ್ಯ ಕಾಣಲು ಇಲ್ಲಿ ಎಡಕ್ಕೆ ತಿರುಗಿ 16 ಕಿಮೀ. ಸಾಗಬೇಕು. ನಂತರ ಎದುರಾಗುವುದು ಮುಂಡಾಜೆ ಎಂಬ ಗ್ರಾಮ. ಇಲ್ಲಿನ ಸಮೀಪದ ಕದಿರುದ್ಯಾವರದ ಬಳಿ ಬಲಕ್ಕೆ ತಿರುಗಿ ಬಂಡಾಜೆ ಗ್ರಾಮ ತಲುಪಬಹುದು ಬಂಡಾಜೆಯ ಗೌಡರ ಮನೆಯಿಂದ ಚಾರಣದ ಹಾದಿ ಆರಂಭವಾಗುತ್ತದೆ. ಬಂಡಾಜೆ ಗೌಡರ ಮನೆ ತಲುಪಲು ಉಜಿರೆಯಿಂದ ಜೀಪಿನ ವ್ಯವಸ್ಥೆ ಮಾಡಬಹುದು.

12-01-2018

 ಬೆಂಗಳೂರಿನಿಂದ ನಾನು ದಿನಕರ್ ಮತ್ತು ಪ್ರಸನ್ನ ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದೆವು , ಬೆಳಗ್ಗೆ 5ಕ್ಕೆ  ಧರ್ಮಸ್ಥಳ  ತಲುಪಿದೆವು . ಸ್ನಾನ ಮುಗಿಸಿ ದರ್ಶನಕ್ಕೆ ಹೊರೆಟಾಗ ಸಮಯ 6.30 ನಿಮಿಷ ಸುಮಾರು 30 ನಿಮಿಷದಲ್ಲಿ  ದರ್ಶನ ಮುಗಿಸಿ ಹೊರಗೆ ಬಂದು , ಒಂದೆರೆಡು ಪೋಟೊ ತೆಗೆದು,  ತಿಂಡಿ ಮುಗಿಸಿದೆವು. ಈಗ ನಮ್ಮ ಪ್ರಯಾಣ ಉಜಿರೆಗೆ ನಾವು ಉಜಿರೆ ತಲುಪಿದಾಗ 8.30 ನಿಮಿಷ ,ಆಗಲೇ  ಧನರಾಜ್ ಚಿಕ್ಕಮಗಳೂರಿನಿಂದ ಉಜಿರೆಗೆ ಬಂದಿದ್ದರು , ಉಜಿರೆಯ ಹೋಟೆಲಿನಲ್ಲಿ ಮದ್ಯಾಹ್ನಕ್ಕೆ ಪಲಾವ್ ಪಾರ್ಸಲ್ ಮಾಡಿಸಿಕೊಡೆವು , ಮತ್ತು ಹಣ್ಣುಗಳನ್ನು  ಖರೀದಿಸಿದೆವು. ಮಂಗಳೂರಿನಿಂದ ಸತೀಶ್ ಇನ್ನು ಬಂದರಲಿಲ್ಲ  ಅಷ್ಟರಲ್ಲಿ ಬಂಡಾಜೆಗೆ ಹೋಗಲು ಜೀಪ್ ವಿಚಾರಿಸಿ ಕೊನೆಯದಾಗಿ 600 ಕ್ಕೆ  ಒಪ್ಪಿಸಿದೆವು. ಸತೀಶ್ ಉಜಿರೆ ತಲುಪಿದಾಗ 10 ಗಂಟೆ ತಕ್ಷಣ ಜೀಪಿನಲ್ಲಿ ಬಂಡಾಜೆ ಊರಿನ ಕಡೆ ಪ್ರಯಾಣ ಬೆಳೆಸಿದೆವು. ಬಂಡಾಜೆ ಜಲಪಾತ ಚಾರಣಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು. ಅರಣ್ಯ ಇಲಾಖೆಯವರಾದ ರಾಜಣ್ಣ ರವರನ್ನು(ದಿನಕರ್ ಸ್ನೇಹಿತರು) ಬೆಳಿಗ್ಗೆನೆ ಸಂಪರ್ಕಿಸಿದ್ದೆವು, ಅವರು ನಮಗೆ ಬಂಡಾಜೆಯಲ್ಲಿ ಸಿಕ್ಕಿ ಚಾರಣ ಹಾದಿಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಮುಂದೆ ನಾವು ಬಂಡಾಜೆಯ ಕೊನೆಯ ಮನೆಯ ಹತ್ತಿರ ಇಳಿದೆವು, 


ಮನೆಯ ಬಲಕ್ಕೆ ಹೋಗುವ ಕಾಲುದಾರಿಯಲ್ಲಿ ನಮ್ಮ ಚಾರಣ ಆರಂಭವಾಯಿತು. ಸಮಯ 11 ಗಂಟೆ.



 ಕಾಲು ದಾರಿ ಸ್ವಲ್ಪ ಸಮಯದ ನಂತರ ಏರುಮುಖವಾಯಿತು. ಸುಮಾರು 30 ನಿಮಿಷದ ನಂತರ ನೀರಿನ ತೊರೆ ಸಿಕ್ಕಿತು ಸ್ವಲ್ಪ ವಿಶ್ರಾಂತಿ ಪಡೆದು ಚಾರಣ ಮುಂದುವರೆಸಿದೆವು. ತಂದಿದ್ದ ತಿಂಡಿಗಳನ್ನು ಒಂದೊಂದು ವಿಶ್ರಾಂತಿಗೆ ಒಂದೊಂದು ತಿಂಡಿ ತಿನ್ನುತ್ತ ನಮ್ಮ ಚಾರಣ ಮುಂದುವರೆಯಿತು.






 ಸುಮಾರು 2 ಗಂಟೆಗಳ ಕಾಲ ದಟ್ಟವಾದ ಕಾಡಿನಲ್ಲಿ ನಡೆದ ನಂತರ ಹುಲ್ಲುಗಾವಲಿನಂತಹ ಪ್ರದೇಶಕ್ಕೆ  ಬಂದೆವು , ಇಲ್ಲಿ ದಾರಿ ಕವಲೊಡೆಯುತ್ತದೆ ಒಂದು ಎಡಕ್ಕೆ ಮತ್ತೊಂದು ನೇರವಾಗಿ ,  ನೇರವಾಗಿರುವ ದಾರಿ  ಸರಿಯಾದ ದಾರಿ. (ಅದು ತಿಳಿಯುವಷ್ಟರಲ್ಲಿ 1 ಕಿ,ಮೀ ತಪ್ಪು ದಾರಿಯಲ್ಲಿ ನಡೆದಿದ್ದೆವು) ಮತ್ತೆ ವಾಪಸ್ ಬಂದು ಈಗ ಸರಿದಾರಿಯಲ್ಲಿ ಚಾರಣ ಮುಂದುವೆರೆಸಿದೆವು. ಬಿಸಿಲಿನ ತಾಪಕ್ಕೆ ಎಲ್ಲರೂ ಸುಸ್ತಾಗಿದ್ದೆವು, ಈಗ 5 ನಿಮಿಷಕ್ಕೆ ಒಮ್ಮೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆವು. ಸುಮಾರು 2.30 ನಿಮಿಷಕ್ಕೆ ಜಲಪಾತದ ಹತ್ತಿರ ತಲುಪಿದೆವು. ಈಗ ಮೊದಲು ಮಾಡಿದ ಕೆಲಸವೆಂದರೆ ತಂದಿದ್ದ ಪಲಾವ್ ನ್ನು ಖಾಲಿ ಮಾಡಿದೆವು.







 ನಂತರ ಹತ್ತು ನಿಮಿಷ ಅಲ್ಲೆ ಬಂಡೆಗಳ ಮೇಲೆ ವಿಶ್ರಾಂತಿ ಪಡೆದ ನಂತರ ಜಲಪಾತದ ಸಮೀಪ ಹೋದೆವು. ಜಲಪಾತದ ಮೇಲಿನಿಂದ ನೀರು ಬೀಳುವ ಸೌಂದರ್ಯವನ್ನು ಕೆಳಕ್ಕೆ ಇಣುಕಿ ನೋಡಬಹುದು. ಪ್ರಪಾತ ದರ್ಶನ ಭಾಗ್ಯವಾಗುವಾಗ ಅಷ್ಟೇ ಜಾಗರೂಕತೆ ಅಗತ್ಯ. ಸುಮಾರು 300 ಮೀ. ಎತ್ತರದಿಂದ ನೀರು ಹಂತಹಂತವಾಗಿ ಕೆಳಕ್ಕೆ ಬೀಳುವುದು ಕಾಣುತ್ತದೆ.







 ನಂತರ ಅಲ್ಲೆ ಪಕ್ಕದಲ್ಲಿದ್ದ ನೀರಿಗೆ ಇಳಿದೆವು, ಸುಮಾರು 1 ಗಂಟೆ ನೀರಿನಲ್ಲಿ ಕಳೆದೆವು. 





 ಆಗಲೇ ಸೂರ್ಯಾಸ್ತದ ಸಮಯ ಆಗುತ್ತಿತ್ತು. ಮತ್ತೆ ಜಲಪಾತದಿಂದ ಮೇಲೆ ಬಂದು ತಂದಿದ್ದ ಟೆಂಟ್ ಹಾಕಿದೆವು. ಅಷ್ಟರಲ್ಲಿ ಸೂರ್ಯಾಸ್ತ ಸಮಯವಾಯಿತು. ಸೂರ್ಯಾಸ್ತ  ಅದ್ಬುತವಾಗಿತ್ತು ಅದರ ಚಿತ್ರಗಳು ಕ್ಯಾಮಾರದಲ್ಲಿ ಸೆರೆಯಾಯಿತು.










ನಂತರ ದಿನಕರ್ ಮತ್ತು ಸತೀಶ್ ಅಡುಗೆ ಮಾಡಲು ಮತ್ತು Camp FIre ಗೆ  ಕಟ್ಟಿಗೆ  ತರಲು ಹೋದರು, ಅಷ್ಟರಲ್ಲಿ ನಾವು ಕಲ್ಲುಗಳನ್ನು ಹುಡುಕಿ ಒಲೆ ರೆಡಿ ಮಾಡಿದೆವು, ಅಷ್ಟರಲ್ಲಿ ಕಟ್ಟಿಗೆ ಬಂದಿತು , ಅನ್ನಕ್ಕೆ ಇಟ್ಟು Camp Fire ರೆಡಿಮಾಡಿದೆವು. ರಾತ್ರಿಯ ಊಟಕ್ಕೆ Soup(ಅನ್ನದ ಗಂಜಿ) , ಚಪಾತಿ ಟಮೊಟ ಗೊಜ್ಜು ಮತ್ತು ಪುಳಿಯೊಗರೆ. ಎಲ್ಲರೂ camp fire ಎದುರು ಕುಳಿತು ಊಟ ಮಾಡಿದೆವು.ನಂತರ ಸ್ವಲ್ಪ ಸಮಯ Camp fire ಪೋಟೋ ಶೂಟ್ ನಡೆಯಿತು. ನಂತರ ನಿದ್ದೆಗೆ ಜಾರಿದೆವು. 













ಬೆಳಿಗ್ಗೆ 5.30 ಕ್ಕೆ ಎದ್ದು ಸೂರ್ಯೋದಯಕ್ಕೆ ಕಾದು ಕುಳಿತೆವು , ಸೂರ್ಯೋದಯವನ್ನು ಕ್ಯಾಮಾರದಲ್ಲಿ ಸೆರೆಹಿಡಿದೆವು. ನಂತರ ಹಾಲಿನ ಪೌಡರ್ ಸಹಾಯದಿಂದ ಕಾಫಿ ರೆಡಿಯಾಯಿತು . ಚುಮು ಚುಮು ಚಳಿಯಲ್ಲಿ ಬಿಸಿ ಬಿಸಿ ಕಾಫೀ ಜೊತೆಯಲಿ ಸುಟ್ಟಿರುವ ಗೆಣಸು ಅದ್ಬುತ.  










ನಂತರ ಟೆಂಟ್ ಮತ್ತು ಬ್ಯಾಗ್ ಗಳನ್ನು ಪ್ಯಾಕ್ ಮಾಡಿ ಅಲ್ಲೆ ಪಕ್ಕದಲ್ಲಿದ್ದ ನೀರಿನ ತೊರೆ ಯಲ್ಲಿ ಸ್ನಾನ ಮುಗಿಸಿ ನಮ್ಮ ಮುಂದಿನ ಗುರಿ  ಬಲ್ಲರಾಯನದುರ್ಗದ ಕಡೆಗೆ ಪ್ರಯಾಣ ಬೆಳೆಸಿದೆವು ಸಮಯ 7.30 ನಿಮಿಷ