ಶ್ರವಣಬೆಳಗೊಳ

ಶ್ರವಣ ಬೆಳಗೊಳ  ಹಾಸನ ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಪ್ರವಾಸಿ ತಾಣ, ಚನ್ನರಾಯಪಟ್ಟಣದಿಂದ 12 ಕಿ.ಮೀ ದೂರದಲ್ಲಿದೆ . ಶ್ರವಣ ಬೆಳಗೊಳದಲ್ಲಿ ವಿಶ್ವವಿಖ್ಯಾತ 58 ಅಡಿ ಎತ್ತರದ ಬಾಹುಬಲಿಯ ಮೂರ್ತಿ ವಿಗ್ರಹವು ಏಕಶಿಲೆಯಿಂದ ನಿರ್ಮಾಣಗೊಂಡಿದ್ದು.. ಜೈನರ ಧಾರ್ಮಿಕ ಕೇಂದ್ರವಾಗಿದೆ.

ಶ್ರವಣ ಬೆಳಗೊಳದ ವಿಂಧ್ಯಗಿರಿಯ ಮೇಲೆ ಕಡೆಯಲಾಗಿರುವ ಈ ಮೂರ್ತಿಯನ್ನು ಚಾವುಂಡರಾಯನು ಬೃಹದಾಕಾರದ ವಿಗ್ರಹವನ್ನು ಕ್ರಿ.ಶ.973 ರಲ್ಲಿ ಕೆತ್ತಿಸಿದನು.ಅರಿಷ್ಟ ನೇಮಿ ಎಂಬುವ ಶಿಲ್ಪಿ ಕೆತ್ತಿದನೆಂದು ಹೇಳಲಾಗುತ್ತದೆ. ಈ ಮೂರ್ತಿಗೆ ಪ್ರತಿ 12  ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ.

ಮಹಾಮಸ್ತಕಾಭಿಷೇಕ ಮುಗಿದು 10 ದಿನಗಳ ನಂತರ ನಮ್ಮ ಪಯಣ ಶ್ರವಣಬೆಳಗೊಳಕ್ಕೆ , ಬೆಳಗ್ಗೆ ಬೆಂಗಳೂರಿನಿಂದ ಹೊರಟಾಗ 7.30 , ಮದ್ಯೆ ಕುಣಿಗಲ್ ರಸ್ತೆಯಲ್ಲಿರುವ ಶಾರ್ಕ್ ಪುಡ್ ಕೋರ್ಟ್ ಪಕ್ಕದಲ್ಲಿ ತಿಂಡಿ ಮುಗಿಸಿ
ಕುಣಿಗಲ್ , ಯಡಿಯೂರು ಮಾರ್ಗವಾಗಿ  ಶ್ರವಣಬೆಳಗೊಳ ತಲುಪಿದೆವು.

ಮೊದಲಿಗೆ ವಿಂದ್ಯಗಿರಿಯನ್ನು ಏರಿ, ಬಾಹುಬಲಿಯ ಮಸ್ತಕಾಭಿಷೇಕವನ್ನು ಕ್ಯಾಮಾರದಲ್ಲಿ ಸೆರೆಹಿಡಿದು ವಿಂದ್ಯಗಿರಿಯನ್ನು ಒಂದು ಸುತ್ತು ಹಾಕಿ . ಕೆಳಗೆ ಇಳಿದು ಚಂದ್ರಗಿರಿ  ಏರಿದೆವು , ಚಂದ್ರಗಿರಿ ಬೆಟ್ಟದಲ್ಲಿ  ಸುಮಾರು ಜೈನ ಬಸದಿ ಗಳಿವೆ. ಇವುಗಳನ್ನೆಲ್ಲ ಒಂದು ಸುತ್ತು ಹಾಕಿ ಕೆಳಗೆ ಇಳಿದೆವು ಆಗಲೇ 2 ಗಂಟೆಯಾಗಿತ್ತು . ಮಠದಲ್ಲಿ ಊಟ ಮುಗಿಸಿ ಸ್ವಲ್ಪ ವಿಶ್ರಾಂತಿ ಪಡೆದ ನಂತರ ಮತ್ತೆ ನಮ್ಮ ಪಯಣ ಬೆಂಗಳೂರಿನ ಕಡೆಗೆ...