ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಶ್ರೀ ಆದಿ ಚುಂಚನಗಿರಿ ಕ್ಷೇತ್ರ ತ್ರಿವಿಧ ದಾಸೋಹಗಳ ಮಹಾಮನೆ. ಇದು ಪಂಚಲಿಂಗಗಳ ಕ್ಷೇತ್ರ. ಪ್ರಕೃತಿ ದತ್ತವಾದ ಈ ಕ್ಷೇತ್ರವು ದೈವನೆಲೆಯಾಗಿದೆ.
ನಾಗಮಂಗಲ ಪಟ್ಟಣದಿಂದ 20 ಕಿ.ಮೀ. ಹಾಗೂ ಯಡಿಯೂರಿನಿಂದ 20 ಕಿ,ಮೀ ದೂರದಲ್ಲಿದೆ ಆದಿ ಚುಂಚನಗಿರಿ.
ಲಿಂಗರಾಜುವಿನ ಹೊಸ ಕಾರಿನಲ್ಲಿ ದೂರದ ಪ್ರಯಾಣದ ಯೋಜನೆ ತುಂಬಾ ದಿನಗಳಿಂದ ಬಾಕಿ ಉಳಿದಿತ್ತು . ಜನವರಿ 1 ಹೊಸ ವರ್ಷದ ದಿನ ಅದಕ್ಕೆ ಕಾಲ ಕೂಡಿ ಬಂದಿತ್ತು. ನಾನು ಲಿಂಗರಾಜು ಮತ್ತು ದಿನಕರ್ ಗೊರಗುಂಟೆ ಪಾಳ್ಯದಿಂದ ಹೊರಟಾಗ ಸಮಯ 9.30 ನಿಮಿಷ. ನೆಲಮಂಗಲ ದಾಟಿ ಕುಣಿಗಲ್ ರಸ್ತೆಯಲ್ಲಿ ತಟ್ಟೆ ಇಡ್ಲಿ ಹೋಟೆಲಿನಲ್ಲಿ ಇಡ್ಲಿ ಮತ್ತು ಟೀ ಕುಡಿದು ಪ್ರಯಾಣ ಮುಂದುವರೆಸಿದೆವು .
ಚುಂಚನಗಿರಿ ತಲುಪಿದಾಗ ಸಮಯ 11.30 ನಿಮಿಷ.
ಹೊಸ ವರ್ಷವಾಗಿದ್ದರಿಂದ ಜನಸಂದಣಿ ಜಾಸ್ತಿ ಇತ್ತು , ಮೊದಲು ಶ್ರೀ ಬಾಲಗಂಗಾಧರನಾಥ ಸ್ವಾಮೀಗಳ ಮಹಾ ಸನ್ನಿಧಿಗೆ ಭೇಟಿ ನೀಡಿದೆವು ನಂತರ ಕಾಲಬೈರೇಶ್ವರನ ದರ್ಶನ ಮುಗಿಸಿ ನಂತರ ಗಂಗಾದರೇಶ್ವರ , ಗವಿಸಿದ್ದೇಶ್ವರ , ಚಂದ್ರಮೌಳೇಶ್ವರ ಲಿಂಗಗಳ ದರ್ಶನ ಮಾಡಿದೆವು.
ಪಂಚ ಲಿಂಗಗಳ ದರ್ಶನ ಮುಗಿಸಿ , ಬೆಟ್ಟ ಏರಲು ರೆಡಿಯಾದೆವು ಮೊದಲಿಗೆ ಚೇಳೂರ ಕಂಬಕ್ಕೆ ಹೊರೆಟೆವು ಇಲ್ಲಿ ಬಂಡೆಗಳ ಮೇಲೆ ಹೊಡೆದಿರುವ ಕಬ್ಬಿಣದ ಗೂಟಗಳ ಸಹಾಯದಿಂದ ಏರಬೇಕು.
ಇಲ್ಲಿಂದ ಆಕಾಶ ಬೈರವ ಬಂಡೆ ಏರಿದೆವು , ಇಲ್ಲಿ ಬಂಡೆಯನ್ನು ಕಬ್ಬಿಣ ಸರಪಳಿ ಹಿಡಿದು ಹತ್ತಬೇಕು , ಆಕಾಶ ಬೈರವ ಬಂಡೆಯಿಂದ ಆದಿ ಚುಂಚನಗಿರಿ ಕ್ಷೇತ್ರದ ಸಂಪೂರ್ಣ ಚಿತ್ರಣ ವೀಕ್ಷಿಸಬಹುದು.
ಕೆಳಗೆ ಇಳಿದ ತಕ್ಷಣ ಹೊರಟಿದ್ದು ದಾಸೋಹ ಭವನಕ್ಕೆ , ಊಟ ಮುಗಿಸಿ ಸ್ವಲ್ಪ ವಿಶ್ರಾಂತಿ ಪಡೆದು ಬೆಂಗಳೂರಿನ ಕಡೆಗೆ ಹೊರೆಟೆವು , ಬೆಂಗಳೂರು ತಲುಪಿದಾಗ ಸಂಜೆ 6 ಗಂಟೆ.
No comments:
Post a Comment