ಯೋಜನೆ ಪ್ರಕಾರ ನಾನು , ದಿನಕರ್ ಮತ್ತು ಪ್ರಸನ್ನ ಮೂವರು ಬೊಮ್ಮನಹಳ್ಳಿಯ Justcycling ಅಂಗಡಿ ಮುಂದೆ ಸೇರಿದಾಗ ಸಮಯ 10 ಗಂಟೆ ಆದರೆ ಅಂಗಡಿ ತೆರೆದಿದ್ದು 10.30 ನಿಮಿಷಕ್ಕೆ ತಡ ಮಾಡದೆ 3 BTWin MyBike ಸೈಕಲ್ ಗಳನ್ನು ಬಾಡಿಗೆಗೆ ಪಡೆದು ಹೊರಟಾಗ ಸಮಯ 11 ಗಂಟೆ.
ಅಲ್ಲಿಂದ ಸಿಲ್ಕ್ ಬೋರ್ಡ್ ಮುಖಾಂತರ ಸರ್ಜಾಪುರ ರಸ್ತೆಯಲ್ಲಿ ದೊಡ್ಡ ಕನ್ನಲ್ಲಿ ತಲುಪಿದೆವು ಇಲ್ಲಿವರೆಗೂ ಬೆಂಗಳೂರಿನ ಟ್ರಾಫಿಕ್ !! ಇಲ್ಲಿಂದ ಮುಂದೆ ಎಡಕ್ಕೆ ಗುಂಜೂರು ರಸ್ತೆಗೆ ತಿರುಗಿದ ಮೇಲೆ ಖಾಲಿ ರಸ್ತೆಗಳು ಎದುರಾದವು ಮತ್ತು ಪ್ರಯಾಣ ಸುಲಭವಾಯಿತು. ಸುಮಾರು 1 ಗಂಟೆ ಪಯಣದ ನಂತರ ಮೊದಲ ವಿಶ್ರಾಂತಿಗೆ ನಿಲ್ಲಿಸಿದ್ದು ಗುಂಜೂರು ಸಮೀಪ ಸುಮಾರು 16 ಕಿ,ಮೀ ಕ್ರಮಿಸಿದ್ದೆವು .
ಇಲ್ಲಿಂದ ಮುಂದೆ ಗುಂಜೂರು - ನೆರಿಗೆ - ಮುಗಳೂರು ಮುಖಾಂತರ ಚಿಕ್ಕ ತಿರುಪತಿ ತಲುಪಿದಾಗ ಸಮಯ 1.45 ನಿಮಿಷ , ಒಟ್ಟು ಕ್ರಮಿಸಿದ ದೂರ 36 Km ತೆಗೆದುಕೊಂಡ ಸಮಯ 2.45 ನಿಮಿಷ (13KM / Hour) .
ದೇವಸ್ಥಾನದಲ್ಲಿ ಜನಸಂದಣಿ ಕಡಿಮೆ ಇತ್ತು ದರ್ಶನ ಮುಗಿಸಿ ಊಟದ ನಂತರ ಪೋಟೋ ಸೇಷನ್ ಶುರುವಾಯಿತು.
ಚಿಕ್ಕ ತಿರುಪತಿಯಿಂದ ಹೊರಟಾಗ ಸಮಯ 2.45 ನಿಮಿಷ , ಮತ್ತೆ ಅದೇ ಮಾರ್ಗವಾಗಿ ಬರುವಾಗ ಮುಗಳೂರು ಕೆರೆಯ ಬಳಿ ಸ್ವಲ್ಪ ಸಮಯ ಕಳೆದೆವು .
ಸ್ವಲ್ಪ ವಿಶ್ರಾಂತಿಯ ನಂತರ ಮತ್ತೆ ಪಯಣ ಬೆಂಗಳೂರಿನ ಕಡೆಗೆ , ಕೊನೆಯದಾಗಿ ಬೊಮ್ಮನಹಳ್ಳಿ ತಲುಪಿದಾಗ ಸಮಯ 6.45 ನಿಮಿಷ , ಬರುವಾಗ ತೆಗೆದುಕೊಂಡ ಸಮಯ 4 ಗಂಟೆ !!
ಮಾರ್ಗ : ಸಿಲ್ಕ್ ಬೋರ್ಡ್ - ಸರ್ಜಾಪುರ ರಸ್ತೆ - ದೊಡ್ಡಕನ್ನಲ್ಲಿ - ಗುಂಜೂರು - ನೆರಿಗೆ - ಮುಗಳೂರು - ಚಿಕ್ಕತಿರುಪತಿ
ಕ್ರಮಿಸಿದ ಒಟ್ಟು ದೂರ = 72 ಕಿ.ಮೀ
ತೆಗೆದುಕೊಂಡ ಸಮಯ : 6.45 ನಿಮಿಷ
AVG Speed 10 KM / Hour
No comments:
Post a Comment