ಬದರಿನಾಥ್ ಮತ್ತು ಮಾನಾ ಹಳ್ಳಿ


ಬೆಳಗ್ಗೆ 5 ಗಂಟೆಗೆ ಎದ್ದು ರೆಡಿಯಾಗಿ ಗೌರಿಕುಂಡ್ ಗೆ  ಗುಡ್ ಬೈ ಹೇಳಿ ಜೀಪ್ ಸ್ಟಾಂಡ್ ಹತ್ತಿರ ಬಂದೆವು. ಇನ್ನು ಜೀಪ್ ಬಂದಿರಲಿಲ್ಲ. ಸುಮಾರು 20 ನಿಮಿಷದ ನಂತರ ಮೊಲ ಜೀಪ್  ಬಂತು. ಇದರಲ್ಲಿ ಸೋನಪ್ರಯಾಗ್ ತಲುಪಿದೆವು . ಸೋನಪ್ರಯಾಗದಿಂದ ಬದರಿನಾಥಕ್ಕೆ ನೇರ ಬಸ್ ಇರುವುದಾಗಿ ತಿಳಿದಿದ್ದೆವು. ಆದರೆ ಸೋನಪ್ರಯಾಗದಲ್ಲಿ  ವಿಚಾರಿಸಿದಾಗ ಯಾವುದೇ ನೇರ ಬಸ್ಸು ಇಲ್ಲದಿರುವುದು ತಿಳಿಯಿತು. ಕೊನೆಗೆ ಸೋನಪ್ರಯಾಗದಿಂದ  ರುದ್ರಪ್ರಯಾಗಕ್ಕೆ ಬಂದೆವು . 




 
ರುದ್ರಪ್ರಯಾಗದ ನಿಲ್ದಾಣದಲ್ಲಿ ಟೀ ಕುಡಿದು ಮತ್ತೊಂದು ಬಸ್ಸಿನಲ್ಲಿ ಜೋಶಿಮಠಕ್ಕೆ ಬಂದು ತಲುಪಿದಾಗ ಸಮಯ ಮದ್ಯಾಹ್ನ 3 ಗಂಟೆ (ಆದಿ ಗುರು ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ 4 ಮಠಗಳಲ್ಲಿ ಜೋಶಿಮಠವೂ ಒಂದಾಗಿದ್ದು 8 ನೇ ಶತಮಾನದಲ್ಲಿ ನಿರ್ಮಿತವಾಗಿದೆ. ಹಿಂದು ಧರ್ಮದ ಪವಿತ್ರವಾದ ವೇದಗಳಲ್ಲಿ ಒಂದಾದ 'ಅಥರ್ವ ವೇದ'ಕ್ಕೆ ಈ ಮಠವು ಸಮರ್ಪಿತವಾಗಿದೆ) ಬೆಳಗ್ಗೆಯಿಂದ ಏನು ತಿಂದಿರಲಿಲ್ಲಜೋಶಿಮಠದಲ್ಲಿ ದಕ್ಷಿಣ ಭಾರತದ ಊಟಕ್ಕಾಗಿ ಹೋಟೆಲ್ ಹುಡುಕಾಡಿದೆವು ಕೊನೆಗೆ ದಿನಕರ್ ಗುಜರಾತಿ ಹೋಟೆಲ್ ಗೆ ಕರೆದುಕೊಂಡು ಹೋದ ಹೊಟ್ಟೆ ಹಸಿದಿತ್ತು ( Full Meals ಕನಸಲ್ಲಿ) 4ಊಟ ಆರ್ಡರ್ ಮಾಡಿದೆವು, ಆದರೆ ನಿರಾಸೆ ಕಾದಿತ್ತು ಊಟದಲ್ಲಿ ಒಂದು ಕಪ್ ಅನ್ನ(= Bangalore Half rice) ಸಾಂಬಾರ್ , ಹಪ್ಪಳ , 1 ಪಲ್ಯ ಬೆಲೆ 180 *4 = 720 ,(ಇದರಿಂದ ಕಲಿತ ಪಾಠ ಉತ್ತರಭಾರತದಲ್ಲಿ ದಕ್ಷಿಣ ಭಾರತದ  ಊಟ ಹುಡುಕಬಾರದು) FULL Meals ಮುಗಿಸಿ ಇನ್ನೊಂದು ಬಸ್ಸಿನಲ್ಲಿ ಬದರಿನಾಥಕ್ಕೆ ಹೊರೆಟೆವು. ಆದರೆ 5 ಕಿ.ಮೀ ಬರುವಷ್ಟರಲ್ಲಿ ಟ್ರಾಫಿಕ್ ಜಾಮ್ ಆಗಿತ್ತು ಏನೆಂದು ವಿಚಾರಿಸಿದಾಗ ಬಂಡೆಕಲ್ಲುಗಳು ರಸ್ತೆಗೆ ಅಡ್ಡವಾಗಿ ಬಿದ್ದಿದ್ದವು , ಸಣ್ಣಗೆ ಮಳೆ ಶುರುವಾಯಿತು, ಕಲ್ಲುಗಳನ್ನು ತೆರೆವುಗೊಳಿಸುವ ಕಾರ್ಯ ನಡೆಯುತ್ತಿತ್ತು ಸುಮಾರು 1 ಗಂಟೆಗಳ ಬಳಿಕ ರಸ್ತೆ ತೆರೆವುಗೊಳಿಸಲಾಯಿತು. ಪ್ರಯಾಣ ಮುಂದುವರೆಯಿತು. ಜೋಶಿಮಠದಿಂದ ಬದರಿನಾಥದ ರಸ್ತೆ ಅತ್ಯಂತ ಕಿರಿದಾಗಿತ್ತು ಮತ್ತು ಅಲ್ಲಲ್ಲಿ ಬಂಡೆಗಳು ರಸ್ತೆಗೆ ಅಡ್ಡಗಾಲಿ ಬಿದ್ದಿರುತ್ತಿದ್ದವು. ನಾವು ಬದರಿನಾಥ ತಲುಪುವ ವೇಳೆಗೆ ಆಗಲೇ ಕತ್ತಲಾಗಿತ್ತು. 
  ಮೊದಲು ಉಡುಪಿ ಮಠಕ್ಕೆ ಹೋಗಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ , ಪ್ರೆಶ್ ಆಗಿ ಬದರಿ ದೇವಾಲಯ ಕಡೆಗೆ ಹೊರೆಟೆವು, ರಾತ್ರಿ ಆರತಿ ನಡೆಯುತ್ತಿತ್ತು. ದರ್ಶನ ಮಾಡುವುದಕ್ಕೆ 30 ನಿಮಿಷವಾಯಿತು . ನಂತರ ಬದರಿನಾಥದ ಬೀದಿಗಳಲ್ಲಿ ಒಂದು ಸುತ್ತು ಹಾಕಿ ಬಂದೆವು. ಇಲ್ಲಿ ನುರಾರು ಅಂಗಡಿಗಳು ಅದರಲ್ಲಿ ಬಟ್ಟೆ ಅಂಗಡಿಗಳು ಜಾಸ್ತಿ. ಮಠಕ್ಕೆ ಬರುವ ವೇಳೆಗೆ 8 ಗಂಟೆಯಾಗಿತ್ತು. ಮಠದಲ್ಲಿ ರಾತ್ತಿಯ ಫಲಹಾರ(ಉಪ್ಪಟ್ಟು) ಚೆನ್ನಾಗಿತ್ತು ನಾವು ದೆಹಲಿಗೆ ಬಂದ ನಂತರ ಮೊದಲ ರುಚಿಯಾದ ತಿಂಡಿ ಇದಾಗಿತ್ತು. 

 ನಾಳಿನ ಕಾರ್ಯಕ್ರಮದ ಪಟ್ಟಿ ದೊಡ್ಡದಿತ್ತು 1) ಮತ್ತೊಮ್ಮೆ ದರ್ಶನ  ಮಾಡುವುದು 2) ಚರಣ ಪಾದುಕೆ (2KM) 3)ಮಾನಾ ಹಳ್ಳಿ (4km) 4) ವಸುಧರಾ ಜಲಪಾತ (7+7 = 14km) ಒಟ್ಟು 20KM ಚಾರಣ ಮಾಡಬೇಕಾಗಿತ್ತು. ಬೆಳಿಗ್ಗೆ ಎದ್ದು ತಪ್ತಕುಂಡಕ್ಕೆ ಸ್ನಾನಕ್ಕೆ ಹೊರಟಾಗ ಮಠದ ಹಿಂಬಾಗದ ಹಿಮಪರ್ವತಕ್ಕೆ ಮೊದಲ ಸೂರ್ಯಕಿರಣಗಳು ಬಿದ್ದಾಗ ಬಿಳಿ ಬಣ್ಣದ ಹಿಮ ಪರ್ವತಗಳು ಚಿನ್ನದ ಬಣ್ಣಕ್ಕೆ ತಿರುಗಿರುವ ದೃಶ್ಯ ಅಧ್ಬುತವಾಗಿತ್ತು ,

 ತಪ್ತ ಕುಂಡಕ್ಕೆ ತೆರಳಿ ಬಿಸಿ ನೀರಿನಲ್ಲಿ ಅಲ್ಲ ಕುದಿಯುವ ನೀರಿನಲ್ಲಿ  ಸ್ನಾನ ಮಾಡಿ ದೇವರ ದರ್ಶನ ಮಾಡಿದೆವು.








  ಅಂಗಡಿ ಬೀದಿಯ ಹೋಟೆಲ್ ಒಂದರಲ್ಲಿ ಮಸಾಲೆ ದೋಸೆ ಮತ್ತು onion ದೋಸೆ ( ಮತ್ತೆ ದಕ್ಷಿಣ ಭಾರತದ ತಿಂಡಿ ||) ತೆಗೆದು ಕೊಂಡೆವು . onion ದೋಸೆ  =  ದೋಸೆ + ಈರುಳ್ಳಿ ಅಂದರೆ ಕತ್ತರಿಸಿರುವ ಈರುಳ್ಳಿಯನ್ನು ದೋಸೆಯ ಮೇಲೆ ಇಟ್ಟು ಕೊಟ್ಟಿದ್ದರು. ಆದರೆ ಮಸಾಲೆ ದೋಸೆ ಇಷ್ಟವಾಯಿತು ಆದರೆ ಬೆಲೆ ದುಬಾರಿ (150Rs). ನಮ್ಮ ಮುಂದಿನ ಸ್ಥಳ ಚರಣಪಾದುಕೆ ದೇವಾಲಯದಿಂದ 2 ಕಿ.ಮೀ ದೂರವಿದೆ, ದಾರಿ ಏರುಮುಖವಾಗಿದೆ ಇಲ್ಲಿಗೆ ಹೋಗಲು 45 ನಿಮಿಷ ತೆಗೆದುಕೊಂಡೆವು. 







ಇಲ್ಲಿ ವಿಷ್ಣುವಿನ ಪಾದದ ಗುರುತಿದೆ. ಇಲ್ಲಿಂದ ಬದರೀನಾಥದ ಪ್ರಕೃತಿ ಸೌಂದರ್ಯ ನೋಡಲು 2 ಕಣ್ಣು ಸಾಲದು. ಇಲ್ಲಿನ ಗುಹೆಯಲ್ಲಿ ಒಬ್ಬ ಸಾಧುಗಳು ನೆಲೆಸಿದ್ದರು ಅವರು ಸ್ಥಳದ ಮಹಿಮೆ ವಿವರಿಸಿದರು ಮತ್ತು ನಮಗೆಲ್ಲಾ ಬೆಟ್ಟದಲ್ಲಿ ಸಿಗುವ ಗಿಡಮೂಲಿಕೆಗಳಿಂದ ಮಾಡಿದ ಚಹಾ ಕೊಟ್ಟರು. ಇಲ್ಲಿವರೆಗೂ ನಾವು ಕುಡಿದಿರುವ ಅಧ್ಬುತ ಚಹಾ ಅದು. ಇಲ್ಲಿ ಕ್ಯಾಮರಾಗಳಿಗೆ ಬಹಲ ಕೆಲಸ ಕೊಟ್ಟೆವು.  














 ಇಲ್ಲಿಂದ  ಹೋಗಲು ಮನಸ್ಸಾಗುತ್ತಿರಲಿಲ್ಲ ಆದರೆ ಸಮಯದ ಅಭಾವದಿಂದ ಹೊರಡಬೇಕಾಯಿತು. ಮಠದಲ್ಲಿ 12.30 ಕ್ಕೆ ಊಟದ ಸಮಯ ಯಾವುದೇ ಕಾರಣಕ್ಕೂ ತಪ್ಪಿಸುವಂತಿರಲಿಲ್ಲ ಯಾಕೆಂದರೆ ತುಂಬಾ ದಿನಗಳಾಗಿದ್ದವು ರುಚಿಯಾದ ಊಟ ಮಾಡಿ, ಬೇಗ ಬೇಗ ಬೆಟ್ಟದಿಂದ ಇಳಿದು ಮಠ ಸೇರಿದೆವು. ಊಟ ರೆಡಿಯಾಗಿತ್ತು ರುಚಿಯಾದ ಅನ್ನ ಸಾಂಬಾರ್ , ಮಜ್ಜಿಗೆ  , ಉಪ್ಪಿನಕಾಯಿ  ಮುಷ್ಠಾನ್ನ ಬೋಜನವಾಯಿತು ಈಗ ಸಮಯ 1.30 ನಿಮಿಷ ರೂಮಿಗೆ ತೆರಳಿ ಸ್ವಲ್ಪ ವಿಶ್ರಾಂತಿ ಪಡೆದು 2 ಗಂಟೆಗೆ ಮುಂದಿನ ಗುರಿ ಮಾನಾ ಹಳ್ಳಿ ಇದು ನಮ್ಮ ಬಾರತ ದೇಶದ ಕೊನೆಯ ಹಳ್ಳಿ ಬದರೀನಾಥದಿಂದ 5 ಕಿ,ಮೀ ದೂರ ಇಲ್ಲಿಂದ ನಡೆದುಕೊಂಡು ಹೋದೆವು(45 ನಿಮಿಷ).






 ಮಾನಾಹಳ್ಳಿಯಲ್ಲಿ ವ್ಯಾಸಗುಹಾ ನೋಡಿಕೊಂಡು ಭಾರತ ದೇಶದ ಕೊನೆಯ ಚಹಾ ಅಂಗಡಿಯಲ್ಲಿ ಚಹಾ ಕುಡಿದೆವು. 








ಇಲ್ಲಿಂದ ಭೀಮ್ ಪುಲ್ ಸರಸ್ವತಿ ನದಿಯ ಉಗಮ ಸ್ಥಳಕ್ಕೆ ಬೇಟಿಕೊಟ್ಟೆವು. ಆಗಲೇ ಸಮಯ 4 ಗಂಟೆ , ಇಲ್ಲಿಂದ ಮುಂದೆ ವಸುಧರಾ ಜಲಪಾತಕ್ಕೆ 7 ಕಿ.ಮೀ ಗಳ ಚಾರಣ (7+7 ಒಟ್ಟು 14 ಕಿ.ಮೀ) , ಬರುವಾಗ ಕತ್ತಲಾಗಿರುತ್ತದೆ ಎಂಬ  ಆತಂಕದಲ್ಲಿ ಸ್ವಲ್ಪ ದೂರ ಹೋಗಿ ವಾಪಸ್ ಬರೋಣವೆಂದು ಹೊರೆಟೆವು ಆದರೆ ಕೊನೆಗೆ ದಿನಕರ್ ಒತ್ತಾಯದ ಮೇರೆಗೆ ಜಲಪಾತಕ್ಕೆ ಹೊರೆಟೆವು ಸಾಲು ಬೆಟ್ಟಗಳ ನಡುವಿನ ಚಾರಣದ ಹಾದಿ ಬೇರೆ ಯಾವುದೋ ಲೋಕದಲ್ಲಿ ಸಂಚರಿಸುತ್ತಿದ್ದೆವೆ ಎಂಬ ಅನುಭವ . 


 
ಆದರೆ ಎಷ್ಟೇ ನಡೆದರು ದಾರಿ ಸವೆಯುತ್ತಿರಲಿಲ್ಲ ಎಲ್ಲರೂ ತುಂಬಾ ಸುಸ್ತಾಗಿದ್ದೆವು ಕೊನೆಯದಾಗಿ ಜಲಪಾತ ತಲುಪಿದಾಗ 6.30 ನಿಮಿಷ ನಾನು ಮತ್ತು ಪ್ರಸನ್ನ ದೂರದಿಂದಲೆ ಜಲಪಾತದ ಪೋಟೊ ತೆಗೆದೆವು.








ಪೋಟೊ ತೆಗೆದು ನಾನು ಮತ್ತು ಪ್ರಸನ್ನ ವಾಪಸ್ ಹಿಂದುರುಗಿದೆವು ಆಗಲೇ ಕತ್ತಲಾಗುತ್ತ ಬಂದಿತ್ತು ಇನ್ನು ಸುಮಾರು 2 ಗಂಟೆಗಳ ಚಾರಣ ಮಾಡಬೇಕಾಗಿತ್ತು ನಂತರ  ದಿನಕರ್ ಮತ್ತು ಧನರಾಜ್ ಸೇರಿಕೊಂಡರು ತಮಗಾದ ಜಲಪಾತದ ಅನುಭವ ಹೇಳಿಕೊಂಡರು ದೂರದಿಂದ ನೀರಿನ ರೀತಿ ಕಾಣುತ್ತಿದ್ದ ಜಲಪಾತ ಹತ್ತಿರದಿಂದ ನೋಡಿದಾಗ Ice ಗಡ್ಡೆಗಳ ರೀತಿ ಬೀಳುತ್ತಿದ್ದವಂತೆ. ಎಲ್ಲರೂ ಬಿರುಸಾಗಿ ನಡೆಯಲು ಶುರು ಮಾಡಿದೆವು . ಸಂಪೂರ್ಣ ಕತ್ತಲಾಗಿತ್ತು ಮೊಬೈಲ್ ಟಾರ್ಚ್ ಗಳ ಸಹಾಯದಿಂದ ನಡೆದು ಮಾನಾಹಳ್ಳಿ ತಲುಪಿದೆವು ಸಮಯ 8 ಗಂಟೆಯಾಗಿತ್ತು . ಇಲ್ಲಿಂದ ಮತ್ತೆ 5 ಕಿ.ಮೀ ನಡೆಯಬೇಕಾಗಿತ್ತು ರಸ್ತೆಯಲ್ಲಿ ನಡೆಯುತ್ತಿರುವಾಗ ಬದರಿನಾಥದ ಕಟೆಗೆ ಹೋಗುತ್ತಿದ್ದ ಜೀಪ್ ಸಿಕ್ಕಿತು ಅವರು 5 ನಿಮಿಷದಲ್ಲಿ ಬದರಿನಾಥ ತಲುಪಿಸಿದರು. ನೇರವಾಗಿ ದೇವಾಲಯಕ್ಕೆ ತೆರಳಿ ಮತ್ತೊಮ್ಮೆ ದರ್ಶನ ಮಾಡಿ ಉಡುಪಿ ಮಠಕ್ಕೆ ತೆರೆಳಿ ರಾತ್ರಿ ಫಲಹಾರ(ಅವಲಕ್ಕಿ ) ಮುಗಿಸಿ ರೂಮಿಗೆ ತೆರಳಿ ವಿಶ್ರಾಂತಿ ಪಡೆದೆವು , ಬೆಳಿಗ್ಗೆ 5 ಗಂಟೆಗೆ ಎದ್ದು ರೆಡಿಯಾಗಿ ಬಸ್ಸಿನಲ್ಲಿ ಹರಿದ್ವಾರಕ್ಕೆ ಪ್ರಯಾಣ ಬೆಳೆಸಿದೆವು. ಸಂಜೆ ಹರಿದ್ವಾರ ತಲುಪಿದಾಗ 5 ಗಂಟೆ. ಮತ್ತೊಮ್ಮೆ ಗಂಗಾ ಆರತಿ ನೋಡಿಕೊಂಡು ಊಟ ಮುಗಿಸಿ ರಾತ್ರಿ 11 ಗಂಟೆ ಬಸ್ಸಿಗೆ ದೆಹಲಿಗೆ ಹೊರೆಟೆವು , ದೆಹಲಿ ತಲುಪಿದಾಗ ಬೆಳಗ್ಗೆ 5 ಗಂಟೆ , ನಮ್ಮ ಬೆಂಗಳೂರಿಗೆ ರೈಲು  9 ಗಂಟೆಗೆ.

"ಇಲ್ಲಿಗೆ ನಮ್ಮ ಮೊದಲ ಹಿಮಾಲಯ ಯಾತ್ತೆ ಮುಗಿದಿತ್ತು"

No comments:

Post a Comment