ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ (Kamalashile)

 

ಉಡುಪಿ ಜಿಲ್ಲೆಯ ಕುಂದಾಪುರದಿಂದ 35 ಕಿ.ಮಿ. ಅಂತರದ ಸಿದ್ದಾಪುರದಿಂದ 6 ಕಿ.ಮಿ. ಅಂತರದಲ್ಲಿನ ಪ್ರಕೃತಿ ರಮಣೀಯ ಕ್ಷೇತ್ರ, ಮಗ್ಗುಲಿನಲ್ಲೇ ಹರಿವ ಕುಬ್ಜ ನದಿ. ಪ್ರತಿಬಾರಿ ಮಳೆಗಾಲದ ದಿನಗಳಲ್ಲಿ ಒಂದೆರಡು ಬಾರಿಯಾದರೂ ನದಿಯ ನೀರು ಉಕ್ಕಿ ಹರಿದು, ದುರ್ಗೆಯ ಗರ್ಭಗುಡಿಯನ್ನು ಪ್ರವೇಶಿಸಿ ದೇವಿಯ ಸೇವೆ ಮಾಡುತ್ತದೆಯಂತೆ.  ಸಂತೃಪ್ತಿಯಲ್ಲಿ ಊಟ ಬಡಿಸುವ ದೇವಸ್ಥಾನವೊಂದು ಇದ್ದರೆ ಅದು ಸಿದ್ದಾಪುರದ ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ!. ನೀವೊಮ್ಮೆ ಕಮಲಶಿಲೆ ದೇವಸ್ಥಾನದಲ್ಲಿ ಊಟ ಮಾಡಿದಿರೆಂದರೆ ಆ ಊಟವನ್ನ ಜೀವನದಲ್ಲೆಂದೂ ಮರೆಯುವುದು ಸಾಧ್ಯವಿಲ್ಲ. ಅಲ್ಲಿ ಬಡಿಸುವ ಪ್ರತೀ ಅಗುಳು ಅನ್ನದಲ್ಲೂ ಪ್ರೀತಿಯಿದೆ,  ಅತ್ಯಂತ ಕಾರಣೀಕ ಕ್ಷೇತ್ರವಾದ ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ಕ್ಷೇತ್ರ ಕೇವಲ ಒಂದು ದೇವಸ್ಥಾನವಾಗಿ ಮಾತ್ರವೇ ಅಲ್ಲ ಅಲ್ಲಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಬಂದ ಭಕ್ತರನ್ನ ಗೌರವಿಸುವ ವಿಚಾರದಲ್ಲಿಯೂ ನೂರು ಹೆಜ್ಜೆ ಮುಂದಿದೆ.

ಸುಪಾರ್ಶ್ವ ಗುಹೆ

ಈ ಗುಹೆಯು ಸ್ವಾಭಾವಿಕವಾಗಿ ನಿರ್ಮಾಣವಾಗಿದ್ದು, ಸಾವಿರಾರು ವರ್ಷಗಳ ಹಿಂದೆ ಸುಪಾರ್ಶ್ವ ಎನ್ನುವ ಋಷಿಮುನಿ ಈ ಗುಹೆಯಲ್ಲಿ ಸಪಸ್ಸು ಮಾಡಿದ್ದರೆಂದು ಈ ಗುಹೆಗೆ ಸುಪಾರ್ಶ್ವ ಗುಹೆ ಎಂದು ಹೆಸರು ಬಂದಿದೆ. ಈ ಆದಿಗುಹಾಲಯವು ಕಮಲಶಿಲೆ ದೇವಿಯ ಮೂಲಸ್ಥಳವಾಗಿದೆ.

ಈ ಗುಹೆಯಲ್ಲಿ ಜಲ ಉದ್ಭವ ಕಾಣಸಿಗುತ್ತದೆ , ವರ್ಷದ ಎಲ್ಲ ಕಾಲದಲ್ಲೂ ಇಲ್ಲಿ ನೀರು ಕಾಣ ಸಿಗಲಿದ್ದು , ಈ ನೀರು ಕಮಲಶಿಲೆಯ ದೇವಸ್ಥಾನದ ಪಕ್ಕದಲ್ಲಿ ಹರಿಯುವ ಕುಭ್ಜಾ ನದಿಯನ್ನು ಸೇರಲಿದ್ದು, ಪ್ರತೀ ವರ್ಷ ಮಳೆಗಾಲದಲ್ಲಿ ಒಮ್ಮೆ ನದಿಯ ನೀರು ಉಕ್ಕಿ ದೇವಸ್ಥಾನ ಪ್ರವೇಶಿಸಿ ದೇವಿಗೆ ಅಭಿಷೇಕದ ರೀತಿಯಲ್ಲಿ ಸ್ಪರ್ಶಿಸಿ ಹೋಗುತ್ತದೆ.













No comments:

Post a Comment