ಗಡಾಯಿಕಲ್ಲು

 ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಮುಖ ಆಕರ್ಷಣೆ 'ಗಡಾಯಿ ಕಲ್ಲು' . ಚಾರಣ ಪ್ರಿಯರಿಗಂತೂ ಅಚ್ಚುಮೆಚ್ಚಿನ ತಾಣ. ಬೆಳ್ತಂಗಡಿ-ಉಜಿರೆಯಲ್ಲಿ ನಿಂತು ನೋಡಿದರೆ ಕಾಣುವ ಬೃಹತ್‌ ಗಾತ್ರದ ಕಲ್ಲು ಬಂಡೆಯೇ ಗಡಾಯಿಕಲ್ಲು. ಇದನ್ನು ಸ್ಥಳೀಯರು ಜಮಲಾಬಾದ್ ಕೋಟೆಯೆಂದು ಕರೆಯುತ್ತಾರೆ.

1200 ಅಡಿ ಎತ್ತರದಲ್ಲಿರುವ ಈ ಗಡಾಯಿಕಲ್ಲು ಏಕಶಿಲಾ ಪರ್ವತವಾಗಿದೆ. ಸಮುದ್ರ ಮಟ್ಟದಿಂದ ಸುಮಾರು 1788 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲಿನ ನರಸಿಂಹಗಡ ಕೋಟೆ ನೋಡಬೇಕೆಂದರೆ ಬರೋಬರಿ 2,800 ಮೆಟ್ಟಿಲುಗಳನ್ನು ಹತ್ತಬೇಕಾಗಿದೆ. ಇಲ್ಲಿಯ ಮೆಟ್ಟಿಲುಗಳನ್ನು ಹತ್ತಿ ಹೋಗುವುದೇ ಒಂದು ಸಾಹಸ.

















No comments:

Post a Comment