ಸಾತೋಡಿ ಜಲಪಾತ - Sathodi waterfall

 ಉತ್ತರ ಕನ್ನಡ ಜಲಪಾತಗಳಿಗೆ ಸ್ವರ್ಗ ತಾಣ. ಹಾಗಾಗಿ ಇದನ್ನು ಜಲಪಾತಗಳ ಜಿಲ್ಲೆ ಎಂದೇ ಕರೆಯುತ್ತಾರೆ. ನಿತ್ಯ ಹರಿದ್ವರ್ಣದ ಕಾಡುಗಳಿಂದ ಆವೃತ್ತವಾದ ಈ ಪ್ರದೇಶದಲ್ಲಿ ಜಲಧಾರೆಗಳ ವೈಭವ ನೋಡುವಂತಿರುತ್ತದೆ. ಮುಗಿಲು ಮುಟ್ಟಿರುವ ಬೆಟ್ಟಗಳ ಮೇಲಿಂದ ಭೋರ್ಗರೆಯುತ್ತಾ ಬಂದು ಭೂಮಿಗೆ ಧುಮುಕುತ್ತವೆ. ಭೂಮಿಗೆ ಬಂದ ಮೇಲೆ ಮತ್ತೆ ಸುಮ್ಮನಾಗಿ ನದಿಗೆ ಸೇರುವ ಪರಿ ಅನನ್ಯ. ಅಂತಹ ಒಂದು ಜಲಪಾತದ ಸಾಲಿನಲ್ಲಿ ಸಾತೋಡಿ ಜಲಪಾತ ಮುಂದೆ ನಿಲ್ಲುತ್ತದೆ

ದಟ್ಟವಾದ ಕಾಡು, ಹಚ್ಚ ಹಸುರಿನ ವನಸಿರಿ, ನಡುವೆ ಹಕ್ಕಿಗಳ ಕಲರವ, ಬಂಡೆಗಳ ಮಧ್ಯೆ ಹಾವಿನಂತೆ ಹರಿದು ಬರುವ ಜಲಧಾರೆ. ಅಬ್ಬಾ! ಇದನ್ನು ನೋಡಲು ಎಷ್ಟು ಸುಂದರ ಎನಿಸುತ್ತದೆ ಅಲ್ಲವಾ? ಹೌದು, ಇಂತಹ ಒಂದು ಸೌಂದರ್ಯಕ್ಕೆ ಕನ್ನಡಿ ಹಿಡಿದು ನಿಲ್ಲುತ್ತದೆ ಸಾತೋಡಿ ಜಲಪಾತ. ವರ್ಷವಿಡೀ ವೈಯಾರದಿಂದ ಶೋಭಿಸುತ್ತದೆ. ಮಳೆಗಾಲದಲ್ಲಿ ಇನ್ನಷ್ಟು ಬಿಳಿ ನೊರೆಯಿಂದ ದುಮ್ಮಿಕ್ಕುತ್ತಾ ತಾನು ಯಾರಿಗೆ ಸರಿಸಾಟಿ ಇಲ್ಲ ಎಂದು ಕೇಳುತ್ತದೆ. ಸಾತೋಡಿಯ ವೈಭವವನ್ನು ಕಾಣಲು ಪ್ರತಿದಿನ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಇದು ಕಾಳಿಯ ಉಪನದಿ ಸುರಬ್ಬಿ ಹಳ್ಳದಿಂದ ಬರುತ್ತದೆ. ಸುಮಾರು 50 ಅಡಿ ಎತ್ತರದಿಂದ ದುಮ್ಮಿಕ್ಕುತ್ತಾ ಮಂದಿಯ ಹೃದಯವನ್ನು ಸೂರೆಗೊಳಿಸುತ್ತದೆ. ಇದನ್ನು ಕೇಳಿ ನಿಮಗೂ ಇಲ್ಲಿಗೆ ಬರಬೇಕು ಅನಿಸಿದರೆ ಒಮ್ಮೆ ಬಂದುಬಿಡಿ.

Sathodi Falls is at a distance of 30 km from Yellapur. It takes almost 1 hour to reach. There are potholes in the first half stretch of the road. Remaining stretch is a newly built concrete road. From the parking lot you need to walk for about 1 km to reach the falls. The rectangular waterfall is a picturesque beauty, pool under waterfall is crystal clear. Sathodi falls is distinctly photogenic






















No comments:

Post a Comment