ಮಧುಕೇಶ್ವರ ದೇವಸ್ಥಾನ (ಬನವಾಸಿ)
ಮಧುಕೇಶ್ವರ ದೇವಾಲಯವು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿದೆ.ಸುಮಾರು 1700 ವರ್ಷದ ಹಿಂದೆ ಕದಂಬರ ಕಾಲದಲ್ಲಿ ದೇವಾಲಯವನ್ನು ಕಟ್ಟಲಾಗಿದೆ.ಪ್ರಸಿದ್ಧ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಈ ದೇವಾಲಯವನ್ನು ನಿರ್ಮಿಸಿದನೆಂದು ನಂಬಲಾಗಿದೆ.ಪವಿತ್ರ ವರದಾ ನದಿಯು ದೇವಾಲಯದ ಎದುರಿಗೆ ಹರಿಯುತ್ತಿದೆ.
ಮಧುಕೇಶ್ವರ ದೇವಸ್ಥಾನದ ಜೇನು ತುಪ್ಪದ ಬಣ್ಣದಲ್ಲಿರೋ ಶಿವಲಿಂಗ. ಅಲ್ಲದೇ ಮೋನೋಲಿತಾ ಆಸ್ತಾನ ಮಂಟಪ, ತ್ರಿಲೋಕ ಮಂಟಪ, ಹಾಗೂ ದೊಡ್ಡ ನಂದಿ.ಅಷ್ಟೇ ಅಲ್ಲದೇ ದ್ರಾವಿಡರ ಕಾಲದ ವೀರಭದ್ರ ದೇವಾಲಯವೂ ಎಂಥವರನ್ನೂ ಆಕರ್ಷಿಸುತ್ತದೆ.
ದೇವಾಲಯ ಪ್ರವೇಶಿಸುವಾಗ ಮೊದಲು ಎದುರಾಗುವುದು ಎರಡು ಆನೆಗಳ ಆಕೃತಿಗಳು. ಮತ್ತೊಂದು ಸುತ್ತಿನಲ್ಲಿ 7 ಅಡಿ ಎತ್ತರದ ಏಕಶೀಲ ನಂದಿ ನಿಮ್ಮನ್ನು ಸ್ವಾಗತಿಸುತ್ತದೆ. ಈ ನಂದಿಯ ಒಂದು ಕಣ್ಣು ಮಧುಕೇಶ್ವರನ ಕಡೆಗೆ ದೃಷ್ಟಿ ನೆಟ್ಟರೆ ಮತ್ತೊಂದು ಗುಡಿಯಲ್ಲಿರುವ ಪಾರ್ವತಿಯತ್ತ ನೋಡುತ್ತಿರುವುದು ವಿಶೇಷ. ಗುಡಿಯನ್ನು ಎಷ್ಟು ಸೂಕ್ಷ್ಮವಾಗಿ ನಿರ್ಮಿಸಲಾಗಿದೆ ಎಂದರೆ ಯಾವ ಕಂಬವೂ ದೇವರಿಗೆ ಎಲ್ಲಿಂದರೂ ಅಡ್ಡವಾಗುವುದಿಲ್ಲ...
ಇಲ್ಲಿ ಇನ್ನೊಂದು ವಿಶೇಷವೂ ಇದೆ. ಇದಕ್ಕೂ ವಾರಣಾಸಿಗೂ ನೇರ ಸಂಬಂಧವಿದೆ. ಗುಡಿಯ ಬಲಭಾಗಕ್ಕೆ ಅನನ್ಯವಾದ ಅರ್ಧಗಣಪತಿಯ ಮೂರ್ತಿಯಿದೆ.ಇದರ ಇನ್ನೊಂದು ಅರ್ಧಭಾಗ ವಾರಣಾಸಿಯಲ್ಲಿದೆಯೆಂದು ನಂಬಲಾಗಿದೆ
ಕರ್ನಾಟಕ ರಾಜ್ಯ ಸರಕಾರ ಇಲ್ಲಿ ವರ್ಷಕೊಮ್ಮೆ ಡಿಸೆಂಬರ್‌ನಲ್ಲಿ ಕದಂಬೊತ್ಸವ ಆಯೋಜಿಸುತ್ತದೆ...