ಶಿವಪುರ (ಪ್ರಕೃತಿಯ ಮಡಿಲಲ್ಲಿ ಒಂದು ಪುಟ್ಟ ಗ್ರಾಮ)

 ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ 50 ಮನೆಗಳಿರುವ ಪುಟ್ಟ ಹಳ್ಳಿ ಶಿವಪುರ . ದಶಕದ ಹಿಂದೆ ಕೊಡಸಳ್ಳಿ ಜಲವಿದ್ಯುತ್ ಯೋಜನೆಗಾಗಿ ಕಾಳೀ ನದಿಗೆ ಕಟ್ಟಿದ ಅಣೆಕಟ್ಟಿನಿಂದಾಗಿ ಕೊಡಸಳ್ಳಿಯನ್ನು ನೀರು ನುಂಗಿತು. ಶಿವಪುರವನ್ನು ಸಂಪರ್ಕಿಸುವ ಎಲ್ಲಾ ದಾರಿಗಳನ್ನು ಹಿನ್ನೀರು ಮುಳುಗಡೆ ಮಾಡಿತು. ಮೊದಲು ಹಿನ್ನೀರು ದಾಟಲು ಅಪಾಯಕಾರಿಯಾದ ದೇಸಿ ತೆಪ್ಪ ಉಪಯೋಗಿಸಿದ್ದರು.

2015 ರಲ್ಲಿ ಇಲ್ಲಿ ತೂಗುಸೇತುವೆ ನಿರ್ಮಾಣವಾಯಿತು, ಈ ತೂಗುಸೇತುವೆ ಈಗ ಯಲ್ಲಾಪುರದ ಪ್ರಮುಖ ಆಕರ್ಷಣೆಯಾಗಿದೆ.

 ಉಳವಿ ಕಡೆಯಿಂದ ಶಿವಪುರಕ್ಕೆ 7 ಕಿ.ಮೀ ಗಳ ದಟ್ಟ ಕಾಡಿನ ಮಧ್ಯೆ ಕಲ್ಲು ಮಣ್ಣಿನ ರಸ್ತೆ ಈ ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುವುದು ಕಷ್ಟ,(ಈ ರಸ್ತೆ ಅಭಿವೃದ್ದಿ ಹಲವು ವರ್ಷಗಳ ಬೇಡಿಕೆ , ಈ ಸಲ  ಗ್ರಾಮ ಪಂಚಾಯತಿಯ ಚುನಾವಣೆ ಕೂಡ ಬಹಿಷ್ಕರಿಸಿದ್ದರು ಎಂಬ ವರದಿ ಇದೆ. ಪ್ರವಾಸ ಹೋದ ನಮಗೆ ಒಂದು ದಿನ ಈ ರಸ್ತೆಯಲ್ಲಿ ಬೈಕ್ ಓಡಿಸುವುದು ರೋಚಕವಾಗಿತ್ತು. ಆದರೆ ದಿನ ನಿತ್ಯ ಸಂಚಾರ .....)

  ದಟ್ಟ ಕಾಡಿನ ಮಧ್ಯೆ ಈ ದಾರಿಯಲ್ಲಿ ಚಾರಣದ ಅನುಭವ ಅದ್ಬುತವಾಗಿರುತ್ತದೆ. ಶಿವಪುರದಲ್ಲಿ ಒಂದು ಮಠವಿದೆ ದಟ್ಟ ಕಾಡಿನ ನಡುವೆ ಪ್ರಶಾಂತವಾದ ವಾತಾವರಣದಲ್ಲಿ ಶಿವನ ಆಲಯ, ಇಲ್ಲಿ ಬರುವ ಭಕ್ತರಿಗೆ ನಿತ್ಯವು ದಾಸೋಹ ಸಹ ಇದೆ. ಇಲ್ಲಿಂದ ತೂಗುಸೇತುವೆಗೆ 3 ಕಿ.ಮೀ ದಾರಿ (ಯಲ್ಲಾಪುರ ದಿಂದ ಸಾತೋಡಿ ಮಾರ್ಗದಲ್ಲಿ ಬಂದರೆ  ಮೊದಲು ತೂಗು ಸೇತುವೆ ನಂತರ ಮೂರು ಕಿ.ಮೀ ಚಾರಣ ಮಾಡಿದರೆ ಶಿವಪುರ ಮಠ ಸಿಗುತ್ತದೆ , ಬೈಕ್ ಇದ್ದರೆ ತೂಗುಸೇತುವೆ ಮೇಲೆ ಬರಬಹುದು).

























No comments:

Post a Comment