ದೇವಕಾರ ಜಲಪಾತ (Devkar Falls / Kanur Falls)

 

ಕಾಳಿ ನದಿಯ ಹಿನ್ನೀರಿನ ಅಂಚಿನಲ್ಲಿ ಚಾರಣ


ಯಲ್ಲಾಪುರದಿಂದ 30 ಕಿ.ಮೀ ದೂರದಲ್ಲಿರುವ ದೇವಕಾರ ಜಲಪಾತವನ್ನು ವಜ್ರಮಲ ಜಲಪಾತ ಎಂದೂ ಕರೆಯುತ್ತಾರೆ. ಇದು ಕರ್ನಾಟಕ ರಾಜ್ಯದ, ಉತ್ತರ ಕನ್ನಡ ಜಿಲ್ಲೆಯ ಸುಂದರವಾದ ಜಲಪಾತಗಳಲ್ಲಿ ಒಂದಾಗಿದೆ. ಈ ಜಲಪಾತವನ್ನು ನೀವು ದೇವಕಾರ ಗ್ರಾಮದಲ್ಲಿ ನೋಡಬಹುದು. ಕಾರವಾರಕ್ಕೆ ಭೇಟಿ ನೀಡಿದಾಗ ನೋಡಲೇಬೇಕಾದ ಅತ್ಯುತ್ತಮ ಸ್ಥಳಗಳಲ್ಲಿ ದೇವಕಾರ ಜಲಪಾತವೂ ಒಂದಾಗಿದೆ.

ಸುಮಾರು 300 ಅಡಿಯಿರುವ ದೇವಕಾರ ಜಲಪಾತವು ದೇವಕಾರ ಎಂಬ ಸಣ್ಣ ಗ್ರಾಮದಲ್ಲಿದೆ. ಇದು ಕದ್ರಾ ಅಣೆಕಟ್ಟಿನ ಹಿನ್ನೀರಿನಿಂದ ಆವೃತವಾಗಿದೆ. ನೀರು ಬೀಳುವಾಗ ವಜ್ರದಂತೆ ಹೊಳೆಯುವುದರಿಂದ ಈ ಜಲಪಾತವನ್ನು ಸ್ಥಳೀಯರು ವಜ್ರಮಲ ಜಲಪಾತ ಎಂದು ಕರೆಯುತ್ತಾರೆ. ಪ್ರಚಾರದ ಕೊರತೆಯಿಂದಾಗಿ ಈ ಸುಂದರವಾದ ಜಲಪಾತವು ಇನ್ನೂ ಬಹಳಷ್ಟು ಜನರಿಗೆ ತಿಳಿದಿಲ್ಲ. ಅಂದಹಾಗೆ ಜಲಪಾತದ ನೀರು ಕೈಗಾ ಜಲಾಶಯ ತಲುಪುತ್ತದೆ. ಜಲಪಾತವನ್ನು ತಲುಪಲು ಉತ್ತಮವಾಗಿ ಅಭಿವೃದ್ಧಿ ಹೊಂದಿದ ರಸ್ತೆ ಇಲ್ಲ. ದೇವಕಾರ ಗ್ರಾಮವನ್ನು ತಲುಪಲು ಕದ್ರಾ ಜಲಾಶಯದ ಹಿನ್ನೀರನ್ನು ದಾಟಬೇಕು. ಮಳೆಗಾಲದಲ್ಲಂತೂ ಪ್ರವೇಶಿಸಲು ಅಸಾಧ್ಯ. ದಟ್ಟ ಕಾಡುಗಳಿಂದ ಆವೃತವಾಗಿರುವ ಕೆಸರು ಗದ್ದೆಯ ಮೂಲಕ ಜಲಪಾತ ಹಾದಿ ಹಿಡಿಯಬಹುದು.

ಹಳ್ಳಿಯ ಸೊಗಡು ಸವಿಯಬೇಕೆನ್ನುವವರು ಸ್ವಂತ ವಾಹನದಲ್ಲಿ ಜಲಪಾತ ನೋಡಲು ಈ ಮಾರ್ಗದಲ್ಲಿ ತೆರಳಬಹುದು. ಗುಂಪಾಗಿ, ಸ್ನೇಹಿತರ ಜೊತೆ ತೆರಳಿದರೆ ಒಳ್ಳೆಯದು. ಯಲ್ಲಾಪುರ ಪಟ್ಟಣದಿಂದ ಎನ್ಎಚ್ 67 ರಲ್ಲಿ ಇಡಗುಂಡಿ ಹಳ್ಳಿಯವರೆಗೆ ಹೋಗಿ. ನಂತರ ಕಲಾಚೆ ಗ್ರಾಮಕ್ಕೆ ಹೋಗುವ SH 6 ರಸ್ತೆಯಲ್ಲಿ ತೆರಳಿ. ಕಲಾಚೆಗೆ ಹೋಗುವ ದಾರಿಯಲ್ಲಿ ನಿಮಗೆ ಹೆಬ್ಬಾರ ಕುಂಬ್ರಿ ಕ್ರಾಸ್ ಸಿಗುತ್ತದೆ. ಈ ಕ್ರಾಸ್’ನಿಂದ ಈರಪುರ ಹಳ್ಳಿಯ ಕಡೆಗೆ ಹೋಗುವ ರಸ್ತೆಯಲ್ಲಿ ಸಾಗಿದರೆ ಬೆಂಡಘಟ್ಟ ಬೆಟ್ಟ ಸಿಗುತ್ತದೆ. ಇಲ್ಲಿಂದ 6 ಕಿ.ಮೀ. ಸಾಗಿದರೆ ದೇವಕಾರ ಹಳ್ಳಿ ಸಿಗುತ್ತದೆ. ಇಲ್ಲಿ ಸ್ಥಳೀಯರಿಗೆ ಕೇಳಿದರೆ ದೇವಕಾರ ಜಲಪಾತದ ಮಾರ್ಗದ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ನಿಮಗೆ ಬೇಕಾದರೆ ಸ್ಥಳೀಯ ಮಾರ್ಗದರ್ಶಿಯನ್ನು ಜೊತೆಗೆ ಕರೆದುಕೊಂಡು ಹೋಗಬಹುದು. ಬೆಂಡಘಟ್ಟ ಬೆಟ್ಟದ ಬದಿಯಿಂದ ನೀವು ಕಾಳಿ ನದಿಯ ಸುಂದರ ನೋಟವನ್ನು ಕಣ್ತುಂಬಿಕೊಳ್ಳಬಹುದು. ಜೊತೆಗೆ ಕೈಗಾ ಮತ್ತು ಸುತ್ತಮುತ್ತಲಿನ ಗ್ರಾಮಗಳನ್ನು ನೋಡಬಹುದು

Devakar falls / kanoor falls most popularly know as devakar falls it one of the hidden and less explored water falls in uttara karnataka it is located at 30 km from yellapur its very difficulty to find the way to waterfalls because of no proper road to falls.



















No comments:

Post a Comment