ಲೇಪಾಕ್ಷಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿದೆ. ಹಿಂದುಪುರ ಪಟ್ಟಣದಿಂದ 12 ಕಿ.ಮೀ. ದೂರದಲ್ಲಿದೆ. ಇಲ್ಲಿಯ ಜನರು ತಕ್ಕ ಮಟ್ಟಿಗೆ ಕನ್ನಡವನ್ನೂ ಮಾತಾಡುವರು. ಆದ ಕಾರಣ ಹೋದಾಗ ಕನ್ನಡದಲ್ಲೇ ಮಾತಾಡಬಹುದು
ಅಲ್ಲಿರುವ ವೀರಭದ್ರಸ್ವಾಮಿಯ ಗುಡಿಯನ್ನು ವಿಜಯನಗರದ ಅಧಿಕಾರಿಗಳಾಗಿದ್ದ ವೀರಣ್ಣ ಮತ್ತು ವಿರೂಪಣ್ಣ ಎಂಬ ಪೆನುಕೊಂಡದ ನಾಯಕರು ಕಟ್ಟಿಸಿದ್ದು. ಈ ಇಡೀ ಗುಡಿ ವಿಜಯನಗರದ ಶೈಲಿಯಲ್ಲಿದ್ದು, ಹಂಪೆಯನ್ನು ನೆನೆಪಿಸುತ್ತದೆ.
ವೀರಭದ್ರಸ್ವಾಮಿಯ ಗುಡಿಯ ಹಿಂದೆ ಒಂದು ದೊಡ್ದದಾದ ಶಿವಲಿಂಗವಿದ್ದು, ಅದಕ್ಕೆ ಸುತ್ತಿ ಹೆಡೆಯೆತ್ತಿದಂತೆ ಒಂದು ದೊಡ್ಡ ನಾಗರಕಲ್ಲನ್ನು ಕೆತ್ತಲಾಗಿದೆ.
ಇಲ್ಲಿ 70 ಸದೃಢ ಕಂಬಗಳು ದೇವಾಲಯದ ಭಾರವನ್ನು ಹೊತ್ತುಕೊಂಡಿವೆ. ಆದರೂ ಇಲ್ಲಿ ಒಂದು ಕಂಬ ಜನರ ಆಕರ್ಷಣೆಗೆ ಪಾತ್ರವಾಗಿದೆ. ಅದನ್ನು ನೇತಾಡುವ ಕಂಬವೆಂದು ಗುರುತಿಸಲಾಗುತ್ತದೆ. ಅದು ನೆಲವನ್ನು ತಾಕದೆ, ಸ್ವಲ್ಪ ಮೇಲೆಯೇ ನಿಂತಿದೆ. ಒಂದು ತೆಳುವಾದ ಬಟ್ಟೆಯನ್ನು ಅದರ ಕೆಳಗೆ ಹಾಯಿಸಿ ಬೇಕಾದರೂ ನೀವು ಪರೀಕ್ಷಿಸಬಹುದು.
ರೈಲಿನಲ್ಲಿ ಒಂದು ದಿನ
ರೈಲು : ವಿಜಯವಾಡ ಪ್ಯಾಸೆಂಜರ್
ಸಮಯ : ಬೆಳಗ್ಗೆ 7.40ಕ್ಕೆ (ಕಂಟೋನ್ಮೆಂಟ್ ನಿಲ್ದಾಣದಿಂದ)
ಪ್ಯಾಸೆಂಜರ್ಸ್ : ನಾನು, ದಿನಕರ್ , ಶಶಿಧರ್ , ದಿನೇಶ್ , ಸತೀಶ್ , ಹರೀಶ್ , ವಿಕಾಸ್ , ಪ್ರಸನ್ನ ಮತ್ತು ಲಿಂಗರಾಜು
ರೈಲಿನಲ್ಲಿ ಪ್ರಯಾಣ ಮಾಡುವ ಅನುಭವವೇ ಬೇರೆ , ಆರಾಮಾಗಿ ಕುಳಿತುಕೊಂಡು ಎಲ್ಲರೂ ಹರಟುತ್ತಾ ಸಾಗುವಾಗ ಸಮಯ ಕಳೆಯುವುದೇ ತಿಳಿಯುವುದಿಲ್ಲ.
ರೈಲು ಹಿಂದೂಪುರ ತಲುಪಿದಾಗ ಸಮಯ 11 ಗಂಟೆ , ಅಲ್ಲಿಂದ ಬಸ್ಸಿನಲ್ಲಿ 20 ನಿಮಿಷದ ಪ್ರಯಾಣ ಮಾಡಿ ಲೇಪಾಕ್ಷಿ ತಲುಪಿದೆವು.
ವೀರಭದ್ರಸ್ವಾಮಿ ದೇವಾಲಯ ತುಂಬಾ ಪ್ರಾಚೀನ ಕಾಲದ ದೇವಾಲಯವಾಗಿದ್ದು , ಕಂಬದ ಮೇಲಿನ ಕೆತ್ತನೆ ಗಳು ತುಂಬ ಆಕರ್ಷಕ ವಾಗಿದ್ದವು . ದೇವಾಲಯದ ಆವರಣದಲ್ಲಿ ಸುಮಾರು 1 ಗಂಟೆ ಗಳ ಕಾಲ ಪೋಟೋ ಸೇಷನ್ ನಡೆಯಿತು.
ದೇವಾಲಯದ ಮುಖ್ಯರಸ್ತೆ ಯಿಂದ ಸುಮಾರು 1/2 ಕಿ.ಮೀ ದೂರದಲ್ಲಿ ನಂದಿ ವಿಗ್ರಹವಿದೆ. ಇದು ಭಾರತದಲ್ಲೇ ಅತಿ ದೊಡ್ಡ ನಂದಿ ವಿಗ್ರಹವಾಗಿದೆ
ಊಟದ ವ್ಯವಸ್ಥೆ : ನಂದಿ ವಿಗ್ರಹದ ಪಕ್ಕದಲ್ಲಿರುವ A.P Tourism ಅವರ ಹೋಟೆಲ್ ಹರಿತಾ.

No comments:
Post a Comment