ಗುಡ್ಡಟ್ಟು ಗಣಪತಿ ದೇವಾಲಯ

ಕುಂದಾಪುರದಿಂದ ಶಿವಮೊಗ್ಗ ಮಾರ್ಗದಲ್ಲಿನ ಯಡಾಡಿ-ಮತ್ಯಾಡಿ ಗ್ರಾಮದಲ್ಲಿ ತೀರಾ ಅಪರೂಪದ ಒಂದು ದೇವಾಲಯ ಕಾಣಸಿಗುತ್ತದೆ. ಕಾಡು ಮೇಡು ಹಾಗೂ ಹಸಿರು ಬಯಲಿನ ಮದ್ಯ ಬೃಹತ್ ಬಂಡೆಯ ನಡುವೆಯೇ ಗುಡ್ಡಟ್ಟು ವಿನಾಯಕನ ಆವಾಸಸ್ಥಾನ. ಗುಹೆಯ ಬಂಡೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ತೆರೆದಿರುವ ಮಡುವಿನಲ್ಲಿ ಕಾಲು ಮಡಚಿ ದಕ್ಷಿಣಕ್ಕೆ ಮುಖಮಾಡಿ ಸೊಂಡಿಲನ್ನು ತಿರುಚಿ ಕುಳಿತಿರುವ ಡೊಳ್ಳು ಹೊಟ್ಟೆಯ ಗಣಪನ ವಿಗ್ರಹವೇ ಇಲ್ಲಿಯ ಆರಾಧ್ಯ ದೇವ. ಬಹಳಷ್ಟು ಆಕಾರ ಹೊಂದಿರುವ ಶ್ರೀ ದೇವರ ಮೂಲ ಬಿಂಬವು ವರ್ಷದ ಎಲ್ಲಾ ಸಂದರ್ಭದಲ್ಲಿಯೂ ನೀರಿನಲ್ಲಿಯೇ ಮುಳುಗಿರುವುದು ಇಲ್ಲಿನ ವಿಶೇಷ, 

ವಾರಾಹಿನದಿಯಿಂದ ಹರಿದು ಬಂದ ನರಸಿಂಹ ತೀರ್ಥದ ನೀರು ನದಿಯಿಂದ ಹರಿದು ಬಂದು ನರಸಿಂಹ ತೀರ್ಥವಾಗಿ ಮುಂದುವರಿಯುವ ಈ ತೀರ್ಥವು ಗುಡ್ಡಟ್ಟಿನ ದೇವಳದ ಬಾವಿಗೆ ಬಂದು ಸೇರುತ್ತದೆ. ಅಲ್ಲಿ ಬಂಡೆಯಲ್ಲಿ ಮೂಡಿರುವ ಗಣಪನ ಎದೆಯಾಳದವರೆಗೆ ನೀರು ತುಂಬಿ ಆತನನ್ನು ಪೂಜಿಸುತ್ತಾರೆ. ಈ ಆಯಿರ ಕೊಡ ನೀರು ಸೇವೆ ಇಲ್ಲಿಯ ವಿಶೇಷವಾಗಿದೆ. ಬಾವಿಯ ಆಳಕ್ಕೆ ಇಳಿದು ನೀರು ಎತ್ತಿ ಗಣಪನಿರುವ ಬಂಡೆಯ ಕೊಳಕ್ಕೆತುಂಬುತ್ತಾರೆ. ಆಯರ್ ಕೊಡ ಸೇವೆ ಇಲ್ಲಿಯ ವಿಶೇಷ ಸೇವೆ ಆಗಿದ್ದು,  1000 ಸಾವಿರ ಕೊಡ ಜಲ ಅಭಿಷೇಕ ಮಾಡುವ ಈ ಸೇವೆಗೆ ಆಯರ್ ಕೊಡ ಎಂದು ಹೆಸರು.

















ಮತ್ತೊಂದು ವಿಶೇಷ ಅಂದರೆ ಇಲ್ಲಿನ ಊಟ ಬಗೆ ಬಗೆಯ ಪಲ್ಯಗಳು , ಅನ್ನ ಸಾಂಬಾರ್ ಮತ್ತು ಪಾಯಸ ಎಲ್ಲವೂ ತುಂಬಾ ರುಚಿಯಾಗಿರುತ್ತದೆ. 



1 comment:

  1. Slots.lv Casino App Review 2021 - Dr.MD
    Slot machine games are the most popular in 충청북도 출장마사지 the gambling industry 이천 출장샵 today. 김천 출장안마 Their app features a selection 화성 출장샵 of live dealer 전라남도 출장안마 games including Mega Moolah

    ReplyDelete