ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ

ಉಡುಪಿ ಜಿಲ್ಲೆಯ ಕುಂದಾಪುರದಿಂದ 35 ಕಿ.ಮಿ. ಅಂತರದ ಸಿದ್ದಾಪುರದಿಂದ 6 ಕಿ.ಮಿ. ಅಂತರದಲ್ಲಿನ ಪ್ರಕೃತಿ ರಮಣೀಯ ಕ್ಷೇತ್ರ, ಮಗ್ಗುಲಿನಲ್ಲೇ ಹರಿವ ಕುಬ್ಜ ನದಿ. ಪ್ರತಿಬಾರಿ ಮಳೆಗಾಲದ ದಿನಗಳಲ್ಲಿ ಒಂದೆರಡು ಬಾರಿಯಾದರೂ ನದಿಯ ನೀರು ಉಕ್ಕಿ ಹರಿದು, ದುರ್ಗೆಯ ಗರ್ಭಗುಡಿಯನ್ನು ಪ್ರವೇಶಿಸಿ ದೇವಿಯ ಸೇವೆ ಮಾಡುತ್ತದೆಯಂತೆ. ಕಮಲಶಿಲೆಗೆ ಎರಡು ಕಿ.ಮೀ ದೂರದಲ್ಲಿ ಸುಪಾರ್ಶ್ವ ಗುಹೆ ಇದ್ದು ದೇವಿಯ ಆದಿಸ್ಥಾನ ಗುಹೆಯ ಒಳಗಿದೆ. ಗುಹೆಯ ಹೊರಗೆ ಹುಲಿಬನ ಎನ್ನುವ ಸ್ಥಳವಿದೆ. ಅಲ್ಲಿ ಹುಲಿಗಳು ಬೆಂಕಿ ಕಾಯಿಸಿಕೊಳ್ಳುತ್ತಿದ್ದವಂತೆ. ಈಗಲೂ ಕೆಲವೊಮ್ಮೆ ಆ ಬನದಲ್ಲಿ ಬೆಂಕಿ ಹಾಕುವ ಸಂಪ್ರದಾಯವಿದೆಯಂತೆ. ಸಂತೃಪ್ತಿಯಲ್ಲಿ ಊಟ ಬಡಿಸುವ ದೇವಸ್ಥಾನವೊಂದು ಇದ್ದರೆ ಅದು ಸಿದ್ದಾಪುರದ ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ!. ನೀವೊಮ್ಮೆ ಕಲಮಲಶಿಲೆ ದೇವಸ್ಥಾನದಲ್ಲಿ ಊಟ ಮಾಡಿದಿರೆಂದರೆ ಆ ಊಟವನ್ನ ಜೀವನದಲ್ಲೆಂದೂ ಮರೆಯುವುದು ಸಾಧ್ಯವಿಲ್ಲ. ಅಲ್ಲಿ ಬಡಿಸುವ ಪ್ರತೀ ಅಗುಳು ಅನ್ನದಲ್ಲೂ ಪ್ರೀತಿಯಿದೆ, ಯಾವ ಮದುವೆಯಲ್ಲೂ ಇರದಷ್ಟು ಭಕ್ಷ್ಯಗಳು, ಕನಿಷ್ಠ ಮೂರು ಸಿಹಿ ತಿಂಡಿ, ಒಂದೆಡೆಯಾದರೆ ಕೊನೆಗೆ ಮೊಸರಿನಲ್ಲಿ ಊಟ, ಕುಡಿಯಲಿಕ್ಕೆ ಲೋಟದಲ್ಲಿ ಮಜ್ಜಿಗೆ. ಅತ್ಯಂತ ಕಾರಣೀಕ ಕ್ಷೇತ್ರವಾದ ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ಕ್ಷೇತ್ರ ಕೇವಲ ಒಂದು ದೇವಸ್ಥಾನವಾಗಿ ಮಾತ್ರವೇ ಅಲ್ಲ ಅಲ್ಲಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಬಂದ ಭಕ್ತರನ್ನ ಗೌರವಿಸುವ ವಿಚಾರದಲ್ಲಿಯೂ ನೂರು ಹೆಜ್ಜೆ ಮುಂದಿದೆ.
















ಇಲ್ಲಿ ಉಳಿದುಕೊಳ್ಳುವುದಕ್ಕೆ ಸುಸಜ್ಜಿತವಾದ ವಸತಿ ಗೃಹವಿದೆ, ಮುಂಗಡವಾಗಿ ಪೋನಿನ ಮುಖಾಂತರ ಬುಕ್ ಮಾಡಿ ಹೋಗಬಹುದು.
ಪೋನ್ ನಂ : 8259-277221 , 9591560809





No comments:

Post a Comment