ಎರ್ಮಾಯಿ ಜಲಪಾತ


 ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲಿನ ಸಮೀಪದ  ಎರ್ಮಾಯಿ ಎಂಬಲ್ಲಿ ದಟ್ಟ ಕಾನನದ ನಡುವೆ ಪ್ರಶಾಂತ ವಾತಾವರಣದಲ್ಲಿರುವ ಈ ಜಲಪಾತ ಸುಮಾರು 80 ಅಡಿ ಎತ್ತರದಿಂದ ಕಲ್ಲು ಬಂಡೆಗಳ ನಡುವೆ ದುಮುಕಿ ಬರುವ  ಎರ್ಮಾಯಿ ಜಲಪಾತವನ್ನು ನೋಡುವುದೇ ಕಣ್ಣಿಗೊಂದು ಹಬ್ಬ.

ಎರ್ಮಾಯಿ ಜಲಪಾತದಷ್ಟೆ ಸುಂದರವಾಗಿದೆ ಜಲಪಾತಕ್ಕೆ ಸಾಗುವ ದಾರಿ, ದಟ್ಟ ಅರಣ್ಯದ ನಡುವೆ ಸಣ್ಣ ಪುಟ್ಟ ಹಳ್ಳ ತೊರೆ, ಸೇತುವೆಗಳನ್ನು  ದಾಟುತ್ತಾ ಸಾಗುವಾಗ ಸಿಗುವ ಖುಷಿಯನ್ನು ಅನುಭಸಿಯೇ ನೋಡಬೇಕು.

ಇಲ್ಲಿ ಕಿರು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು ವರ್ಷ ಪೂರ್ತಿ ಎರ್ಮಾಯಿ ಸುತ್ತ ಮುತ್ತಲಿನ ಮನೆಗಳಿಗೆ ವಿದ್ಯುತ್ ದೊರೆಕುತ್ತದೆ.

ಬೆಳ್ತಂಗಡಿ ಅಥವಾ ಉಜಿರೆ ಯಿಂದ ದಿಡುಪೆಗೆ ಹೋಗುವ ಬಸ್ಸಿನಲ್ಲಿ ಏರಿ ಕಾಜೂರಿನಲ್ಲಿ ಇಳಿದುಕೊಂಡು ಕಾಡು ದಾರಿಯಲ್ಲಿ 2 ಕಿ.ಮೀ ಸಾಗಿದರೆ ಎರ್ಮಾಯಿ ಜಲಪಾತದ ಮಡಿಲು ಸೇರಬಹುದು.

ನಾವು ಕಡಮಗುಂಡಿ ಜಲಪಾತದಿಂದ ವಾಪಸ್ ದಿಡುಪೆಗೆ ಬಂದು ಅಲ್ಲಿಂದ ಬಸ್ಸಿನಲ್ಲಿ ಕಾಜೂರಿಗೆ(2 ಕಿ.ಮೀ) ಬಂದಾಗ ಸಮಯ ಸುಮಾರು 1.30 ನಿಮಿಷ

ಇಲ್ಲಿಂದ ಕಚ್ಚಾರಸ್ತೆಯಲ್ಲಿ ಚಾರಣ ಶುರುವಾಯಿತು.





 ನಾವು ತಿಳಿದಿದ್ದ ಪ್ರಕಾರ ಈ ಜಲಪಾತಕ್ಕೆ ತುಂಬ ಸುಲಭವಾಗಿ ತಲುಪಬಹುದಿತ್ತು. ಆದರೆ 1 ಕಿ.ಮೀ ನಂತರ ಕಚ್ಚಾರಸ್ತೆ 2 ರಸ್ತೆಯಾಗಿ ಕವಲೊಡೆಯಿತು ಎಡಕ್ಕೆ ಮತ್ತೊಂದು ಬಲಕ್ಕೆ, ಬಲಕ್ಕೆ ಹೋಗುವ ರಸ್ತೆ ಚೆನ್ನಾಗಿದ್ದ ಕಾರಣ ನಾವು ಬಲಭಾಗದ ರಸ್ತೆ ಆಯ್ಕೆ ಮಾಡಿದೆವು (ಆದರೆ ಸರಿಯಾದ ದಾರಿ ಎಡಭಾಗದ ಏರು ರಸ್ತೆ , ಈ ರಸ್ತೆಯಲ್ಲಿ 300 ಮೀ ನಡೆದು ಮತ್ತೆ ಎಡಕ್ಕೆ ಸಿಗುವ ಕಾಲುದಾರಿಯಲ್ಲಿ 10 ನಿಮಿಷ ನಡೆದರೆ ಜಲಪಾತ ತಲುಪಬಹುದು ಇದು ತಿಳಿದಿದ್ದು ಜಲಪಾತದಿಂದ ಹಿಂದಿರುಗುವಾಗ) , ನಾವು ಬಲಭಾಗದ ಕಚ್ಚಾರಸ್ತೆ ಸುಮಾರು 30 ನಿಮಿಷ ನಡೆದರು ಜಲಪಾತ ಸೂಚನೆ ಸಿಗಲಿಲ್ಲ, ಕಚ್ಚಾರಸ್ತೆ ತುಂಬಾ ಏರು ರಸ್ತೆಯಾಗಿತ್ತು. ನಾವು ತಪ್ಪು ದಾರಿಯಲ್ಲಿ ಬಂದಿರುವ ಅನುಮಾನ ಶುರುವಾಯಿತು, ವಿಚಾರಿಸಲು ಯಾವುದೇ ಮನೆಗಳು ಸಿಗಲಿಲ್ಲ ಬೇರೆ ದಾರಿಯಿಲ್ಲದೆ ಅದೇ ದಾರಿಯಲ್ಲಿ ಮುಂದುವರೆದೆವು, ಬಂದು ನೀರಿನ ತೊರೆ ಸಿಕ್ಕಿತು 




ಅದನ್ನು ದಾಟಿ ಮುಂದೆ ಹೋಗುತ್ತಿರುವಾಗ ಊರಿನವರು ಸಿಕ್ಕಿ ನಾವು ತಪ್ಪು ದಾರಿಯಲ್ಲಿ ಬಂದಿರುವುದನ್ನು ಖಚಿತಪಡಿಸಿದರು. ನಾವು ತುಂಬಾ ದೂರ ಬಂದಿರುವುದಾಗಿ ತಿಳಿಸಿದರು. ನಮ್ಮನ್ನು ಸಲ್ಪ ದೂರ ವಾಪಸ್ ಕರೆದುಕೊಂಡು ಬಂದು ಬಲಕ್ಕೆ ಒಂದು ಕಾಲು ದಾರಿ ತೋರಿಸಿ ಈ ದಾರಿಯಲ್ಲಿ ಹೋಗಿ ನೀರಿನ ತೊರೆ ದಾಟಿ  ಎಡಕ್ಕೆ ಬಂಡೆಗಳನ್ನು ಇಳಿದರೆ ಜಲಪಾತಕ್ಕೆ ತಲುಪಬಹುದೆಂದು ತಿಳಿಸಿದರು. ಈ ದಾರಿಯಲ್ಲಿ ಸಾಗುವಾಗ ಮೊದಲ ಹಂತದ ಜಲಪಾತಕ್ಕೆ ಬಂದಿದ್ದೆವು, 


ಅದನ್ನು ದಾಟಿ ಎಡಕ್ಕೆ ಜಾರುವ ಬಂಡೆಗಳನ್ನು  ಇಳಿದು  ಇನ್ನೊಂದು ಜಲಪಾತದ ಹತ್ತಿರ ಬಂದೆವು ಇದು 2ನೇ ಹಂತ , ಈ ಜಲಪಾತದ ಮುಂದೆ ನೀರಿನ ಕೊಳ ಜಾಸ್ತಿ ಆಳ ಇರಲಿಲ್ಲ ಮತ್ತು ಈಜಲು ಕೊಳ ತುಂಬಾ ಚೆನ್ನಾಗಿತ್ತು, 





ಅರ್ಧ ಗಂಟೆ ನೀರಿನಲ್ಲಿ ಕಳೆದು ಇಲ್ಲಿಂದ ಕೆಳಗೆ ಕಾಲುದಾರಿಯಲ್ಲಿ ಇಳಿದಾಗ , ನಮಗೆ ಎದುರಾಗಿದ್ದು ಕೊನೆಯ ಹಂತದ  ಎರ್ಮಾಯಿ ಜಲಪಾತ, ಈ ಜಲಪಾತ ನೋಟ ಅಧ್ಬುತವಾಗಿತ್ತು . 



ಸಣ್ಣ ಪೋಟೊ ಸೇಷನ್ ಮುಗಿಸಿ ವಾಪಸ್ ಬರುವಾಗ ತಿಳಿಯಿತು ನಾವು ಹೋಗುವಾಗ ದಾರಿ ತಪ್ಪಿದ್ದು ಎಲ್ಲಿ ಎಂದು.  ಆದರೆ ಸುಲಭವಾದ ಚಾರಣವನ್ನು ಸಾಹಸಮಯವಾಗಿ ಮತ್ತು ಚೈತನ್ಯಮಯವಾಗಿ ಮಾಡಿದ ಅನುಭವವಾಯಿತು.




No comments:

Post a Comment