ಕೊಣಾಜೆ ಕಲ್ಲು

ಮೂಡಬಿದರೆಯಿಂದ ಶಿರ್ತಾಡಿ ಹೋಗುವ ದಾರಿಯಲ್ಲಿ ಪಡುಕೊಣಜೆ ಗ್ರಾಮವಿದೆ , ಇಲ್ಲಿಂದ  ಎಡಕ್ಕೆ  ಬೃಹದಾಕಾರದ ಜೋಡಿ ಕಲ್ಲುಗಳು ಕಾಣುತ್ತವೆ ಇದೆ ಕೊಣಾಜೆ ಕಲ್ಲು. 200 ಅಡಿಗಳ ಎತ್ತರದಲ್ಲಿ ಸುಂದರ ಕಾಡಿನ ನಡುವೆ ಸಾಗುವ ದಾರಿಯಲ್ಲಿ ಮೇಲೆ ಹತ್ತಿದರೆ  ಪ್ರಶಾಂತ ಅರಣ್ಯದ ನಡುವೆ  ಇರುವ ಕೊಣಾಜೆ ಕಲ್ಲಿನ ಪಾದದ ಅಡಿಯ ಗುಹೆಯೆ ಶ್ರೀ ಶಾರದಾದಾಸರ ಆಶ್ರಮ (ಸಿದ್ದಾಶ್ರಮ). ಅಲ್ಲಿಂದ ಮುಂದೆ ಕೊಣಾಜೆ ನೆತ್ತಿಯ ದಾರಿ.

ನಾನು ಮತ್ತು ದಿನಕರ್ ಧರ್ಮಸ್ಥಳದಿಂದ ಉಜಿರೆಗೆ ತಲುಪಿದೆವು, ಧನರಾಜ್ ಚಿಕ್ಕಮಗಳೂರಿಂದ ಉಜಿರೆಗೆ ಬಂದು ತಲುಪಿದಾಗ ಸಮಯ 11 ಗಂಟೆ. ಉಜಿರೆಯಿಂದ ಬೆಳ್ತಂಗಡಿಗೆ ತೆರಳಿ ಅಲ್ಲಿಂದ ಮೂಡಬಿದರೆಗೆ ಪ್ರಯಾಣ ಬೆಳೆಸಿದೆವು. ಸುಮಾರು 1 ಗಂಟೆ ಪ್ರಯಾಣದ ನಂತರ 12.30 ನಿಮಿಷಕ್ಕೆ ಮೂಡಬಿದರೆ ತಲುಪಿದೆವು. ಬಸ್ ನಿಲ್ದಾಣದ ಪಕ್ಕದ ಹೋಟೆಲ್ ನಲ್ಲಿ ಊಟ ಮುಗಿಸಿ ಮೂಡಬಿದರೆಯಿಂದ ಸುಮಾರು 6 ಕಿ.ಮೀ ದೂರವಿರುವ ಪಡುಕೊಣಾಜೆ ಗ್ರಾಮಕ್ಕೆ ಬಸ್ಸಿನಲ್ಲಿ ತೆರಳಿದೆವು. ಅಲ್ಲಿಂದ ಎಡಕ್ಕೆ ಡಾಂಬರು ರಸ್ತೆಯಲ್ಲಿ 1/2 ಕಿ.ಮೀ ನಡೆದು ಕೊಣಾಜೆ ಕಲ್ಲಿನ ಹತ್ತಿರ ತಲುಪಿದೆವು.











 ಇಲ್ಲಿಂದ ಮುಂದೆ ಸುಂದರ ಕಾಡಿನ ಕಾಲುದಾರಿ. 







ಸುಮಾರು 30 ನಿಮಿಷಗಳ ಚಾರಣದ ನಂತರ ಬೃಹತ್ ಬಂಡೆಗಳ ಸಮೀಪ ತಲುಪಿದೆವು. ಬಂಡೆಗಳ ಪಾದದ ಅಡಿಯ ಗುಹೆಯೆ ಸಿದ್ದಾಶ್ರಮ, ಸಿದ್ದಾಶ್ರಮ ವಿಶಾಲವಾಗಿ ಮತ್ತು ಪ್ರಶಾಂತವಾಗಿತ್ತು. ಸಿದ್ದಾಶ್ರಮದಲ್ಲಿ ಯಾರು ಇರಲಿಲ್ಲ. ನಮ್ಮನ್ನು ಸ್ವಾಗತಿಸಿದ್ದು ಒಂದು ಕೋತಿ ಮತ್ತು ಮತ್ತೊಂದು ಬೆಕ್ಕು.









   
   ಸಿದ್ದಾಶ್ರಮದಲ್ಲಿ ಸ್ವಲ್ಪ ಸಮಯ ಕಳೆದೆವು ನಂತರ ಆಶ್ರಮದ ಮುಂಭಾಗದಲ್ಲಿ  ಎಡಕ್ಕೆ ಇರುವ ಕಾಲುದಾರಿಯಲ್ಲಿ ಕೊಣಾಜೆ ಕಲ್ಲಿನ ತುದಿಯ ಕಡೆ ಹೊರೆಟೆವು. ಮೊದಲ ಬಂಡೆಯನ್ನು ಏರಿದೆವು ಇಲ್ಲಿಂದ ಸುತ್ತಲಿನ ಪ್ರದೇಶವು ಹಸಿರಿನಿಂದ ಕಂಗೊಳಿಸುತ್ತಿತ್ತು. 










ಚಿಕ್ಕ ಪೋಟೋ ಸೇಷನ್ ನಂತರ ಮತ್ತೆ ಮೇಲೆ ಹತ್ತಲು ಶುರು ಮಾಡಿದೆವು . ಕಾಲುದಾರಿಯಲ್ಲಿ ಗಿಡ ಬಳ್ಳಿಗಳ ಮಧ್ಯೆ ನಡೆದು ಹೋಗುವುದು ತುಂಬಾ ಸಾಹಸಮಯವಾಗಿತ್ತು. ಈ ಕಾಲುದಾರಿಯು ಎರಡು ಬೃಹತ್  ಬಂಡೆಗಳ ಮಧ್ಯೆ ಮುಗಿಯಿತು ಇಲ್ಲಿಂದ ಮುಂದೆ ಯಾವುದೇ ದಾರಿ ಇರಲಿಲ್ಲ, ಬಂಡೆಗಳ ಮೇಲೆಲ್ಲ ಪಾಚಿ ಕಟ್ಟಿ ಗಿಡಗಳು ಬೆಳೆದಿದ್ದವು ನೋಡಲು ಆಕರ್ಷಕವಾಗಿತ್ತು





ಇಲ್ಲಿಂದ ಕೆಳಗೆ ಬರುವಾಗ  ಎಡಭಾಗದಲ್ಲಿ ದೊಡ್ಡ ಬಂಡೆ ಕಾಣಿಸಿತು ಈ ಬಂಡೆಯನ್ನು ನಾಲ್ಕು ಕಾಲುಗಳಲ್ಲಿ ಏರಿ ತುದಿ ತಲುಪಬಹುದಿತ್ತು ಆದರೆ ಈಗಾಗಲೇ ಸಮಯವಾಗಿದ್ದರಿಂದ ಆ ಯೋಜನೆ ಕೈಬಿಟ್ಟು ಸಿದ್ದಾಶ್ರಮದ ಕಡೆಗೆ ಹೊರೆಟೆವು. ಸಿದ್ದಾಶ್ರಮದಲ್ಲಿ ಇನ್ನು ಯಾರು ಬಂದಿರಲಿಲ್ಲ, ಸಿದ್ದಾಶ್ರಮದಿಂದ ಕೆಳಗೆ ಇಳಿಯುತ್ತಿರುವಾಗ ಸಿದ್ದಾಶ್ರಮದಲ್ಲಿ ನೆಲೆಸಿರುವ ಶ್ರೀ ಎಂ ಎನ್ ಶಾಂತಿರವರು ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಬೆಟ್ಟ ಏರುತ್ತಿದ್ದರು, ನಮ್ಮನ್ನು ನೋಡಿ ಮಾತನಾಡಿಸಿದರು ಇನ್ನೊಮ್ಮೆ ಬನ್ನಿ ಈ ಕ್ಷೇತ್ರದ ಮಹಿಮೆ ವಿವರಿಸುವುದಾಗಿ ತಿಳಿಸಿ ಮೊಬೈಲ್ ನಂ ಕೊಟ್ಟರು. ನಾವು ಅವರನ್ನು ಬಿಳ್ಕೊಟ್ಟು ಕೆಳೆಗೆ ಇಳಿದೆವು.




ಅಲ್ಲಿಂದ ಮುಖ್ಯರಸ್ತೆಗೆ ಬಂದು ಅಂಗಡಿಯಲ್ಲಿ ತಂಪು ಪಾನೀಯ ಕುಡಿದು 10 ನಿಮಿಷ ವಿಶ್ರಾಂತಿ ಪಡೆದೆವು ಅಷ್ಡರಲ್ಲಿ ಮೂಡಬಿದರೆ ಬಸ್ ಬಂತು ಬಸ್ಸಿನಲ್ಲಿ ಬೆಳ್ತಂಗಡಿ ಮೂಲಕ ವಾಪಸ್ ಧರ್ಮಸ್ಥಳಕ್ಕೆ ಬಂದು ಸೇರಿದಾಗ ಸಮಯ 6 ಗಂಟೆಯಾಗಿತ್ತು , ಅಲ್ಲಿಂದ ಸಹ್ಯಾದ್ರಿ ತೆರಳಿ ಪ್ರೆಶ್ ಆಗಿ ಮತ್ತೊಮ್ಮೆ ಮಂಜುನಾಥನ ದರ್ಶನಕ್ಕೆ ಹೋದೆವು ಈಗ ಸಾಲಿನಲ್ಲಿ ತುಂಬಾ ಜನ ಇದ್ದರು. ದರ್ಶನ ಮುಗಿಸಿ ಪ್ರಸಾದಾಲಯದಲ್ಲಿ ಊಟ ಮುಗಿಸಿ ಕೊಠಡಿಗೆ ಬಂದಾಗ ಸಮಯ ರಾತ್ರಿ 9.45

ಮಾಹಿತಿ : ಕೊಣಾಜೆ ಕಲ್ಲಿನ ಸಿದ್ದಾಶ್ರಮದಲ್ಲಿ ನೆಲೆಸಿರುವ ಶ್ರೀ ಎಂ ಎನ್ ಶಾಂತಿ ಅವರ ಮೊಬೈಲ್ ಸಂಖ್ಯೆ : 9449895313

ನಾಳಿನ ಕಾರ್ಯಕ್ರಮಗಳ ಬಗ್ಗೆ ಮಾತುಕತೆ ನಡೆಸಿ ಬೆಳಗ್ಗೆ 5.30 ಕ್ಕೆ  ಏಳುವುದೆಂದು ತೀರ್ಮಾನಿಸಿ ನಿದ್ದೆಗೆ ಜಾರಿದೆವು.

       "ನಾಳಿನ ನಮ್ಮ ಪಯಣ ಅನಡ್ಕ ಜಲಪಾತಕ್ಕೆ"


1 comment: