ಮಳೆಗಾಲದಲ್ಲೊಂದು ಬೈಕ್ ಸವಾರಿ


 
ಮಳೆಗಾಲ ಬಂತೆಂದರೆ ಜಲಪಾತಗಳು ಜೀವಕಳೆ ಪಡೆದುಕೊಳ್ಳುತ್ತವೆ , ಈ ಸಮಯದಲ್ಲಿ ಜಲಪಾತಗಳನ್ನು ನೋಡುವುದೇ ಒಂದು ಸುಂದರ ಅನುಭವ .

ಈ ಸಲ ಉಡುಪಿ ಜಿಲ್ಲೆಯ  ಶಿರೂರು ಸಮೀಪವಿರುವ  ಕೂಸಳ್ಳಿ ಜಲಪಾತ , ಭಟ್ಕಳ ಸಾಗರ ರಸ್ತೆಯಲ್ಲಿರುವ ಬೀಮೇಶ್ವರ ಜಲಪಾತ , ಹುಲಿಕಲ್ ಘಾಟ್ ಹಾಗೂ ಮೆಟ್ಕಲ್ ಗಣಪತಿ ಗುಡ್ಡಕ್ಕೆ  ಬೈಕಿನಲ್ಲಿ  ಸವಾರಿ ಹೋಗುವುದೆಂದು ಯೋಜನೆ ರೆಡಿಯಾಯಿತು.



ಮೊದಲು ನಾಲ್ಕು ಜನರಿದ್ದ ( ನಾನು , ದಿನಕರ್ , ನರೇಶ್ ಮತ್ತು ಧನರಾಜ್) ತಂಡಕ್ಕೆ  ಮತ್ತೆ ನಾಲ್ಕು ಜನ (ಪ್ರಸನ್ನ , ಗುರುಪ್ರಸಾದ್ , ದಿನೇಶ್ ಹಾಗೂ ಶಶಿಧರ್ ) ಸೇರ್ಪಡೆಯಾದರು  ಈಗ ತಂಡದ ಮೊತ್ತ 8. 

ನಾನು , ದಿನಕರ್ , ಶಶಿಧರ್ , ಪ್ರಸನ್ನ ಮತ್ತು ದಿನೇಶ್ ಬೆಂಗಳೂರಿನಿಂದ , ನರೇಶ್  ಮತ್ತು ಗುರುಪ್ರಸಾದ್ ಬೆಳ್ತಂಗಡಿಯಿಂದ ಮತ್ತು ಧನರಾಜ್ ಚಿಕ್ಕಮಗಳೂರಿನಿಂದ.

ಎಲ್ಲರೂ ಮಣಿಪಾಲಿನ ರಾಯಲ್ ಬ್ರದರ್ಸ್ ಬೈಕ್ ಸೆಂಟರ್ ಹತ್ತಿರ ಸೇರುವುದೆಂದು ತೀರ್ಮಾವಾಯಿತು.

DAY  1 

 ದಿನಕರ್ ಮತ್ತು ನಾನು ಕಾರ್ಕಳದ ದಿನಕರ್ ಮನೆಯಿಂದ ಹೊರಡಲು ರೆಡಿಯಾದೆವು , ಅಲ್ಲಿಗೆ ನರೇಶ್ ಮತ್ತು ಗುರುಪ್ರಸಾದ್ ಬಂದು ಸೇರಿದರು. ದಿನಕರ್ ಮನೆಯಲ್ಲಿ ಎಲ್ಲರೂ ತಿಂಡಿ ತಿಂದು ಟೀ ಕುಡಿದು ಹೊರಟಾಗ ಸಮಯ ಬೆಳಗ್ಗೆ 7.30 , ಜಿಟಿ ಜಿಟಿ ಮಳೆಯಲ್ಲೆ ನಮ್ಮ ಪಯಣ ಆರಂಭವಾಯಿತು. ಅಲ್ಲಿಂದ ಅಜೆಕಾರ್ ಮೂಲಕ ಮಣಿಪಾಲ್ ಬಂದು ಸೇರಿದಾಗ ಸಮಯ 8.30. ಇನ್ನು ಯಾರು ಬಂದಿರಲಿಲ್ಲ . ಚಿಕ್ಕ ಪೋಟೊ ಸೇಷನ್ ನಡೆಯಿತು. 












ಅಷ್ಟರಲ್ಲಿ ಧನರಾಜ್ , ದಿನೇಶ್ , ಪ್ರಸನ್ನ ಮತ್ತು ಶಶಿಧರ್ ಅಲ್ಲಿಗೆ ಬಂದು ಸೇರಿದರು. ತಡಮಾಡದೆ ಎರಡು ಬೈಕ್ ಗಳನ್ನು ಬಾಡಿಗೆಗೆ ಪಡೆದರು. ಈಗ ನಾಲ್ಕು ಬುಲೆಟ್ ಗಳು ಹೊರಡಲು ರೆಡಿಯಾಗಿದ್ದವು . ಸಮಯ ಸುಮಾರು 9.45 ನಿಮಿಷ .

ಅಲ್ಲಿಂದ ನೇರವಾಗಿ ಉಡುಪಿ - ಕುಂದಾಪುರ  ಮುಖಾಂತರ ಶಿರೂರು ಕಡೆಗೆ ಪ್ರಯಾಣ ಬೆಳೆಸಿದೆವು.  ಸುಮಾರು 1 ಗಂಟೆ ಪ್ರಯಾಣದ ನಂತರ ಮರವಂತೆ ಬಳಿಯ ಸಮುದ್ರ ತೀರಕ್ಕೆ ಬಂದು ಸೇರಿದ್ದೆವು. ಇಲ್ಲಿ ಸುಮಾರು 1/2 ಗಂಟೆಗಳ ಕಾಲ ಸಮಯ ಕಳೆದೆವು. 






















ಪೋಟೊ ಸೇಷನ್ ನಂತರ   ಮನೆಯಿಂದ ತಂದಿದ್ದ ನೀರು ದೋಸೆ ತಿಂದು ಅಲ್ಲೆ ಪಕ್ಕದಲ್ಲಿದ್ದ ಅಂಗಡಿಯಲ್ಲಿ ಬಿಸಿ ಬಿಸಿ ಟೀ ಕುಡಿದು ಮತ್ತೆ ಪ್ರಯಾಣ ಮುಂದುವರೆಸಿದೆವು .



 "ಮುಂದಿನ ಪಯಣ.........  ಕೂಸಳ್ಳಿ ಜಲಪಾತಕ್ಕೆ"









ಲೇಪಾಕ್ಷಿ

ಲೇಪಾಕ್ಷಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿದೆ. ಹಿಂದುಪುರ ಪಟ್ಟಣದಿಂದ 12 ಕಿ.ಮೀ. ದೂರದಲ್ಲಿದೆ. ಇಲ್ಲಿಯ ಜನರು ತಕ್ಕ ಮಟ್ಟಿಗೆ ಕನ್ನಡವನ್ನೂ ಮಾತಾಡುವರು. ಆದ ಕಾರಣ ಹೋದಾಗ ಕನ್ನಡದಲ್ಲೇ ಮಾತಾಡಬಹುದು

ಅಲ್ಲಿರುವ ವೀರಭದ್ರಸ್ವಾಮಿಯ ಗುಡಿಯನ್ನು ವಿಜಯನಗರದ ಅಧಿಕಾರಿಗಳಾಗಿದ್ದ ವೀರಣ್ಣ ಮತ್ತು ವಿರೂಪಣ್ಣ ಎಂಬ ಪೆನುಕೊಂಡದ ನಾಯಕರು ಕಟ್ಟಿಸಿದ್ದು. ಈ ಇಡೀ ಗುಡಿ ವಿಜಯನಗರದ ಶೈಲಿಯಲ್ಲಿದ್ದು, ಹಂಪೆಯನ್ನು ನೆನೆಪಿಸುತ್ತದೆ.

ವೀರಭದ್ರಸ್ವಾಮಿಯ  ಗುಡಿಯ ಹಿಂದೆ ಒಂದು ದೊಡ್ದದಾದ ಶಿವಲಿಂಗವಿದ್ದು, ಅದಕ್ಕೆ ಸುತ್ತಿ ಹೆಡೆಯೆತ್ತಿದಂತೆ ಒಂದು ದೊಡ್ಡ ನಾಗರಕಲ್ಲನ್ನು ಕೆತ್ತಲಾಗಿದೆ.

ಇಲ್ಲಿ 70 ಸದೃಢ ಕಂಬಗಳು ದೇವಾಲಯದ ಭಾರವನ್ನು ಹೊತ್ತುಕೊಂಡಿವೆ. ಆದರೂ ಇಲ್ಲಿ ಒಂದು ಕಂಬ ಜನರ ಆಕರ್ಷಣೆಗೆ ಪಾತ್ರವಾಗಿದೆ. ಅದನ್ನು ನೇತಾಡುವ ಕಂಬವೆಂದು ಗುರುತಿಸಲಾಗುತ್ತದೆ. ಅದು ನೆಲವನ್ನು ತಾಕದೆ, ಸ್ವಲ್ಪ ಮೇಲೆಯೇ ನಿಂತಿದೆ. ಒಂದು ತೆಳುವಾದ ಬಟ್ಟೆಯನ್ನು ಅದರ ಕೆಳಗೆ ಹಾಯಿಸಿ ಬೇಕಾದರೂ ನೀವು ಪರೀಕ್ಷಿಸಬಹುದು.

ರೈಲಿನಲ್ಲಿ ಒಂದು ದಿನ 

ರೈಲು : ವಿಜಯವಾಡ ಪ್ಯಾಸೆಂಜರ್ 

ಸಮಯ : ಬೆಳಗ್ಗೆ 7.40ಕ್ಕೆ (ಕಂಟೋನ್ಮೆಂಟ್ ನಿಲ್ದಾಣದಿಂದ)

ಪ್ಯಾಸೆಂಜರ್ಸ್  :   ನಾನು, ದಿನಕರ್ , ಶಶಿಧರ್ , ದಿನೇಶ್ , ಸತೀಶ್ , ಹರೀಶ್ , ವಿಕಾಸ್ , ಪ್ರಸನ್ನ ಮತ್ತು ಲಿಂಗರಾಜು 






ರೈಲಿನಲ್ಲಿ ಪ್ರಯಾಣ ಮಾಡುವ ಅನುಭವವೇ ಬೇರೆ , ಆರಾಮಾಗಿ ಕುಳಿತುಕೊಂಡು ಎಲ್ಲರೂ ಹರಟುತ್ತಾ  ಸಾಗುವಾಗ ಸಮಯ ಕಳೆಯುವುದೇ ತಿಳಿಯುವುದಿಲ್ಲ. 

ರೈಲು ಹಿಂದೂಪುರ ತಲುಪಿದಾಗ  ಸಮಯ 11 ಗಂಟೆ , ಅಲ್ಲಿಂದ ಬಸ್ಸಿನಲ್ಲಿ 20 ನಿಮಿಷದ  ಪ್ರಯಾಣ ಮಾಡಿ ಲೇಪಾಕ್ಷಿ ತಲುಪಿದೆವು. 




ವೀರಭದ್ರಸ್ವಾಮಿ ದೇವಾಲಯ ತುಂಬಾ ಪ್ರಾಚೀನ ಕಾಲದ ದೇವಾಲಯವಾಗಿದ್ದು , ಕಂಬದ ಮೇಲಿನ ಕೆತ್ತನೆ ಗಳು ತುಂಬ ಆಕರ್ಷಕ ವಾಗಿದ್ದವು . ದೇವಾಲಯದ ಆವರಣದಲ್ಲಿ ಸುಮಾರು 1 ಗಂಟೆ ಗಳ ಕಾಲ ಪೋಟೋ ಸೇಷನ್ ನಡೆಯಿತು. 














ದೇವಾಲಯದ ಮುಖ್ಯರಸ್ತೆ ಯಿಂದ  ಸುಮಾರು 1/2 ಕಿ.ಮೀ ದೂರದಲ್ಲಿ  ನಂದಿ ವಿಗ್ರಹವಿದೆ. ಇದು ಭಾರತದಲ್ಲೇ ಅತಿ ದೊಡ್ಡ ನಂದಿ ವಿಗ್ರಹವಾಗಿದೆ




ಊಟದ ವ್ಯವಸ್ಥೆ : ನಂದಿ ವಿಗ್ರಹದ ಪಕ್ಕದಲ್ಲಿರುವ A.P Tourism ಅವರ  ಹೋಟೆಲ್ ಹರಿತಾ.













ಚಿಕ್ಕ ತಿರುಪತಿಗೆ ಸೈಕಲ್ ಸವಾರಿ


 ಯೋಜನೆ ಪ್ರಕಾರ ನಾನು , ದಿನಕರ್ ಮತ್ತು ಪ್ರಸನ್ನ  ಮೂವರು ಬೊಮ್ಮನಹಳ್ಳಿಯ Justcycling ಅಂಗಡಿ ಮುಂದೆ ಸೇರಿದಾಗ ಸಮಯ 10 ಗಂಟೆ ಆದರೆ ಅಂಗಡಿ ತೆರೆದಿದ್ದು 10.30 ನಿಮಿಷಕ್ಕೆ ತಡ ಮಾಡದೆ 3 BTWin MyBike  ಸೈಕಲ್ ಗಳನ್ನು ಬಾಡಿಗೆಗೆ ಪಡೆದು ಹೊರಟಾಗ ಸಮಯ 11 ಗಂಟೆ.

ಅಲ್ಲಿಂದ ಸಿಲ್ಕ್ ಬೋರ್ಡ್ ಮುಖಾಂತರ ಸರ್ಜಾಪುರ ರಸ್ತೆಯಲ್ಲಿ ದೊಡ್ಡ ಕನ್ನಲ್ಲಿ ತಲುಪಿದೆವು ಇಲ್ಲಿವರೆಗೂ ಬೆಂಗಳೂರಿನ ಟ್ರಾಫಿಕ್ !! ಇಲ್ಲಿಂದ ಮುಂದೆ ಎಡಕ್ಕೆ ಗುಂಜೂರು ರಸ್ತೆಗೆ ತಿರುಗಿದ ಮೇಲೆ ಖಾಲಿ ರಸ್ತೆಗಳು  ಎದುರಾದವು ಮತ್ತು ಪ್ರಯಾಣ ಸುಲಭವಾಯಿತು. ಸುಮಾರು 1 ಗಂಟೆ ಪಯಣದ ನಂತರ ಮೊದಲ ವಿಶ್ರಾಂತಿಗೆ ನಿಲ್ಲಿಸಿದ್ದು ಗುಂಜೂರು ಸಮೀಪ ಸುಮಾರು 16 ಕಿ,ಮೀ ಕ್ರಮಿಸಿದ್ದೆವು .









ಇಲ್ಲಿಂದ ಮುಂದೆ ಗುಂಜೂರು - ನೆರಿಗೆ - ಮುಗಳೂರು ಮುಖಾಂತರ ಚಿಕ್ಕ ತಿರುಪತಿ ತಲುಪಿದಾಗ ಸಮಯ 1.45 ನಿಮಿಷ , ಒಟ್ಟು ಕ್ರಮಿಸಿದ ದೂರ 36 Km ತೆಗೆದುಕೊಂಡ ಸಮಯ 2.45 ನಿಮಿಷ (13KM / Hour) .


ದೇವಸ್ಥಾನದಲ್ಲಿ ಜನಸಂದಣಿ ಕಡಿಮೆ ಇತ್ತು ದರ್ಶನ ಮುಗಿಸಿ  ಊಟದ ನಂತರ ಪೋಟೋ ಸೇಷನ್  ಶುರುವಾಯಿತು.











 ಚಿಕ್ಕ ತಿರುಪತಿಯಿಂದ ಹೊರಟಾಗ ಸಮಯ 2.45 ನಿಮಿಷ , ಮತ್ತೆ ಅದೇ ಮಾರ್ಗವಾಗಿ ಬರುವಾಗ ಮುಗಳೂರು ಕೆರೆಯ ಬಳಿ ಸ್ವಲ್ಪ ಸಮಯ ಕಳೆದೆವು .





 ಸ್ವಲ್ಪ ವಿಶ್ರಾಂತಿಯ ನಂತರ ಮತ್ತೆ ಪಯಣ ಬೆಂಗಳೂರಿನ ಕಡೆಗೆ ,  ಕೊನೆಯದಾಗಿ ಬೊಮ್ಮನಹಳ್ಳಿ ತಲುಪಿದಾಗ ಸಮಯ 6.45 ನಿಮಿಷ , ಬರುವಾಗ ತೆಗೆದುಕೊಂಡ ಸಮಯ 4 ಗಂಟೆ !!





ಮಾರ್ಗ :  ಸಿಲ್ಕ್ ಬೋರ್ಡ್ -  ಸರ್ಜಾಪುರ ರಸ್ತೆ -  ದೊಡ್ಡಕನ್ನಲ್ಲಿ - ಗುಂಜೂರು - ನೆರಿಗೆ - ಮುಗಳೂರು - ಚಿಕ್ಕತಿರುಪತಿ 

     ಕ್ರಮಿಸಿದ ಒಟ್ಟು ದೂರ =  72  ಕಿ.ಮೀ

     ತೆಗೆದುಕೊಂಡ ಸಮಯ : 6.45 ನಿಮಿಷ 
    
     AVG Speed 10 KM / Hour